Widgets Magazine

ಅಂಕಿತ್ ಚವ್ಹಾಣ್ ವಿವಾಹಕ್ಕೆ ಪೊಲೀಸರ ಸರ್ಪಗಾವಲು

ಮುಂಬಯಿ| ರಾಜೇಶ್ ಪಾಟೀಲ್| Last Modified ಸೋಮವಾರ, 3 ಜೂನ್ 2013 (13:48 IST)
ರಾಜಸ್ಥಾನ್‌ ರಾಯಲ್ಸ್‌ ತಂಡದ ಸ್ಪಿನ್ನರ್‌ ಅಂಕಿತ್‌ ಚವಾಣ್‌ ಅವರ ವಿವಾಹ ರವಿವಾರ ಪೊಲೀಸರ ಕಣ್ಗಾಲಿನಲ್ಲಿ ನಡೆದಿದೆ.

ಐಪಿಎಲ್‌ನ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಮುಂಬಯಿ ಪೊಲೀಸರ ವಶದಲ್ಲಿದ್ದ ಅಂಕಿತ್‌ ಚವಾಣ್‌ ವಿವಾಹಕ್ಕಾಗಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ನ್ಯಾಯಾಲಯ ಜೂನ್‌ 6ರವರೆಗೆ ಷರತ್ತುಬದ್ಧ ಜಾಮೀನು ನೀಡಿದೆ.

ಐಟಿ ಕಂಪನಿಯಲ್ಲಿ ಕನ್ಸಲ್‌ಟೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರೇಯಸಿ ನೇಹಾ ಸಾಂಬಾರಿ ಅವರನ್ನು ರವಿವಾರ ನಡೆಯಲಿರುವ ಸರಳ ಸಮಾರಂಭದಲ್ಲಿ ಅಂಕಿತ್‌ ವರಿಸಿದ್ದಾರೆ.

ವಿವಾಹ ಸಮಾರಂಭದ ಮೇಲೆ ಕಣ್ಗಾವಲು ಹಾಕಿರುವ ಮುಂಬಯಿ ಅಪರಾಧ ಪತ್ತೆ ದಳ ಪೊಲೀಸರು, ಸಮಾರಂಭಕ್ಕೆ ಆಗಮಿಸುವ ಗಣ್ಯರ ಮೇಲೆ ವಿಶೇಷ ನಿಗಾ ಇಡಲಾಗಿದೆ ಎಂದಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :