ಹೆಣ್ಣು ಮಗುವಿಗೆ ತಂದೆಯಾದ ವೇಗಿ ಭುವನೇಶ್ವರ್ ಕುಮಾರ್

ಮುಂಬೈ| Krishnaveni K| Last Modified ಬುಧವಾರ, 24 ನವೆಂಬರ್ 2021 (17:30 IST)
ಮುಂಬೈ: ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ. ಇಂದು ಅವರ ಪತ್ನಿ ನೂಪುರ್ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದ ಭುವಿ ಇನ್ನಷ್ಟೇ ಮಗುವಿನ ಮುಖ ನೋಡಬೇಕಿದೆ. ಇದೀಗ ತವರಿಗೆ ತೆರಳುತ್ತಿರುವ ಭುವಿ ತಮ್ಮ ಪತ್ನಿ-ಮಗಳೊಂದಿಗೆ ಕಾಲ ಕಳೆಯಲಿದ್ದಾರೆ.


ನಾಲ್ಕು ವರ್ಷಗಳ ಹಿಂದೆ ಭುವನೇಶ್ವರ್ ಕುಮಾರ್-ನೂಪುರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :