ವಿಶ್ವಕಪ್ 2019: ಧೋನಿ ಧರಿಸಿದ ಗ್ಲೌಸ್ ಮೇಲೇ ಎಲ್ಲರ ಕಣ್ಣು!

ಲಂಡನ್| Krishnaveni K| Last Modified ಶುಕ್ರವಾರ, 7 ಜೂನ್ 2019 (09:16 IST)
ಲಂಡನ್: ದ.ಆಫ್ರಿಕಾ ವಿರುದ್ಧ ವಿಶ್ವಕಪ್ ಕೂಟದ ಮೊದಲ ಪಂದ್ಯವಾಡಿದ ಟೀಂ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಆದರೆ ಈ ಪಂದ್ಯದಲ್ಲಿ ವಿಕೆಟ್ ಕೀಪರ್ ಧೋನಿ ಗ್ಲೌಸ್ ಎಲ್ಲರ ಗಮನಸೆಳೆದಿದೆ.
 

ಧೋನಿ ಈ ಪಂದ್ಯದಲ್ಲಿ ಭಾರತೀಯ ಅರೆಸೇನಾ ಪಡೆಯ ಸಮವಸ್ತ್ರವನ್ನು ಪ್ರತಿನಿಧಿಸುವ ಚಿಹ್ನೆಯ ಗ್ಲೌಸ್ ಧರಿಸಿ ಆಡಿದ್ದಾರೆ. ಆ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸಿದ್ದಾರೆ.
 
ಭಾರತೀಯ ಸೇನೆಯ ಗೌರವಯುತ ಸದಸ್ಯರೂ ಆಗಿರುವ ಧೋನಿ ವಿಶ್ವಕಪ್ ನಲ್ಲಿ ಈ ಮೂಲಕ ದೇಶಪ್ರೇಮ ಮೆರೆದಿದ್ದಾರೆ. ಸದಾ ಭಾರತೀಯ ಸೇನೆಯ ಸಮವಸ್ತ್ರವನ್ನು ಹೋಲುವ ಗ್ಲೌಸ್ ನ್ನೇ ತೊಡುವ ಧೋನಿ ತಮ್ಮ ಕಿಟ್ ನಲ್ಲೂ ಅದೇ ಬಣ್ಣವಿರುವಂತೆ ನೋಡಿಕೊಳ್ಳುತ್ತಾರೆ. ಆ ಮೂಲಕ ಸೈನಿಕರ ಮೇಲಿನ ತಮ್ಮ ಗೌರವವನ್ನು ವ್ಯಕ್ತಪಡಿಸುತ್ತಾರೆ. ಇದೀಗ ಧೋನಿಯ ಈ ಸೇನಾ ಗ್ಲೌಸ್ ಗೆ ಅಭಿಮಾನಿಗಳು ಟ್ವಿಟರ್ ನಲ್ಲಿ ಸೆಲ್ಯೂಟ್ ಮಾಡಿದ್ದಾರೆ.
 
ಆದರೆ ಧೋನಿ ಗ್ಲೌಸ್ ಮೇಲೆ ಐಸಿಸಿ ಕೆಂಗಣ್ಣು ಬೀರಿದೆ. ಧೋನಿ ಗ್ಲೌಸ್ ಬದಲಿಸಲು ಬಿಸಿಸಿಐಗೆ ಐಸಿಸಿ ತಾಕೀತು ಮಾಡಿದೆ ಎನ್ನಲಾಗಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಧೋನಿ ಯಾವ ಗ್ಲೌಸ್ ತೊಡಬಹುದು ಎಂಬ ಕುತೂಹಲ ಉಳಿದಿದೆ.
ಇದರಲ್ಲಿ ಇನ್ನಷ್ಟು ಓದಿ :