ಫ್ಯಾನ್ಸ್ ಗೆ ಅಚ್ಚರಿ ಉಂಟುಮಾಡಿದ ಧೋನಿಯ ಸನ್ಯಾಸಿ ಅವತಾರ

Dhoni
ಚೆನ್ನೈ| Krishnaveni K| Last Modified ಸೋಮವಾರ, 15 ಮಾರ್ಚ್ 2021 (09:06 IST)
ಚೆನ್ನೈ: ಐಪಿಎಲ್ ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದಕ್ಕೂ ಮೊದಲು ಧೋನಿ ಹೊಸ ಹೇರ್ ಸ್ಟೈಲ್ ನೊಂದಿಗೆ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.  
> ಧೋನಿ ಸದಾ ತಮ್ಮ ಕೇಶ ವಿನ್ಯಾಸಗಳಿಂದಲೇ ಜನರ ಗಮನ ಸೆಳೆಯುತ್ತಾರೆ. ಆದರೆ ಈ ಬಾರಿ ಅವರು ತಮ್ಮ ಕೂದಲುಗಳಿಗೆ ಸಂಪೂರ್ಣ ಕತ್ತರಿ ಪ್ರಯೋಗ ನಡೆಸಿದ್ದು, ಪಕ್ಕಾ ಸನ್ಯಾಸಿಯ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.>   ಅವರ ಸನ್ಯಾಸಿಯ ಅವತಾರದ ಫೋಟೋವನ್ನು ಐಪಿಎಲ್ ಪ್ರಸಾರಕ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಇದು ಒಂದು ಜಾಹೀರಾತಿನ ಭಾಗ. ಆದರೆ ಕೇವಲ ಜಾಹೀರಾತಿಗಾಗಿ ಧೋನಿ ಕೂದಲು ಇಲ್ಲದೇ ಕಾಣಿಸಿಕೊಂಡಿದ್ದಾರಾ ಅಥವಾ ನಿಜವಾಗಿಯೂ ಕೂದಲಗಳನ್ನು ಸಂಪೂರ್ಣವಾಗಿ ಶೇವ್ ಮಾಡಿಕೊಂಡಿದ್ದಾರಾ ಕಾದುನೋಡಬೇಕಿದೆ.ಇದರಲ್ಲಿ ಇನ್ನಷ್ಟು ಓದಿ :