ನಿವೃತ್ತಿ ಹೇಳಿದ ಯೂಸುಫ್ ಪಠಾಣ್ ಗೆ ತಮ್ಮ ಇರ್ಫಾನ್ ಪಠಾಣ್ ಸಂದೇಶ

ಮುಂಬೈ| Krishnaveni K| Last Modified ಶನಿವಾರ, 27 ಫೆಬ್ರವರಿ 2021 (08:54 IST)
ಮುಂಬೈ: ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಆಲ್ ರೌಂಡರ್ ಯೂಸುಫ್ ಪಠಾಣ್ ಗೆ ಅವರ ಸಹೋದರ, ಕ್ರಿಕೆಟಿಗ ಇರ್ಫಾನ್ ಪಠಾಣ್ ಭಾವನಾತ್ಮಕ ಸಂದೇಶ ಬರೆದಿದ್ದಾರೆ.
 

ನೀನು ನನಗೆ ಸ್ಪೂರ್ತಿಯಾಗಿದ್ದೆ ಲಾಲ. ಅದರಲ್ಲೂ ವಿಶೇಷವಾಗಿ ನನಗೆ ಸಿಕ್ಸರ್ ಸಿಡಿಸಲು ಸ್ಪೂರ್ತಿ ನೀಡಿದ್ದೆ. ವಿಶ್ವಕಪ್, 3 ಐಪಿಎಲ್ ಟ್ರೋಫಿ,  16 ಪಂದ್ಯ ಶ್ರೇಷ್ಠ ಪುರಸ್ಕಾರಗಳು, 2 ಮುಷ್ತಾಕ್ ಅಲಿ ಟೂರ್ನಮೆಂಟ್ ಚಾಂಪಿಯನ್ ಶಿಪ್, ದುಲೀಪ್ ಟ್ರೋಫಿ ಚಾಂಪಿಯನ್ ಶಿಪ್ ಪಡೆದ ತಂಡದ ಸದಸ್ಯನಾಗಿರುವೆ. ನಿನ್ನಂತಹ ಸಹೋದರನನ್ನು ಪಡೆದ ನಾನು ಅದೃಷ್ಟವಂತ. ಮುಂದೆಯೂ ನೀನು ನೀನಾಗಿರು’ ಎಂದು ಇರ್ಫಾನ್ ಹಾರೈಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :