ಭುಜದ ಗಾಯದ ನಡುವೆಯೂ ಆಡಿ ದ.ಆಫ್ರಿಕಾ ಮಾನ ಕಾಪಾಡಿದ ಕೇಶವ್ ಮಹಾರಾಜ್

ಪುಣೆ| Krishnaveni K| Last Modified ಭಾನುವಾರ, 13 ಅಕ್ಟೋಬರ್ 2019 (08:50 IST)
ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದರೂ ದ.ಆಫ್ರಿಕಾ ಬೌಲರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮಾನ ಉಳಿಸಿದ್ದಾರೆ.

 
ದ್ವಿತೀಯ ದಿನವೇ ಫೀಲ್ಡಿಂಗ್ ಮಾಡುವಾಗ ಜಾರಿ ಬಿದ್ದ ಭಾರತೀಯ ಮೂಲದ ಕೇಶವ್ ಮಹಾರಾಜ್ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದಾರಂತೆ. ಹಾಗಿದ್ದರೂ ಅವರು ಬೌಲಿಂಗ್ ಮಾಡಿದ್ದಲ್ಲದೆ, ಇಂದು ಭರ್ಜರಿ ಬ್ಯಾಟಿಂಗ್ ಮಾಡಿ 74 ರನ್ ಸಿಡಿಸಿದ್ದಾರೆ. ಆಫ್ರಿಕಾ ಪರ ಇಂದು ಅವರದ್ದೇ ಗರಿಷ್ಠ ಸ್ಕೋರ್. ತಾವು ಗಾಯಗೊಂಡಿರುವ  ವಿಚಾರವನ್ನು ಅವರು ತೃತೀಯ ದಿನದಂತ್ಯಕ್ಕೆ ಬಹಿರಂಗಪಡಿಸಿದ್ದಾರೆ.
 
ಇನ್ನೂ ಭುಜದಲ್ಲಿ ನೋವಿದೆ. ಹಾಗಿದ್ದರೂ ಫಿಲ್ಯಾಂಡರ್ ಮತ್ತು ನಾನು ಚಹಾ ವಿರಾಮದವರೆಗೆ ಬ್ಯಾಟಿಂಗ್ ಮಾಡಲೇಬೇಕೆಂದು ನಿರ್ಧರಿಸಿದ್ದೆವು. ಈ ಗಾಯ ಗಂಭೀರವಾಗದೇ ಸುಧಾರಿಸಬಹುದು ಎಂದು ನಂಬಿದ್ದೇನೆ ಎಂದು ಕೇಶವ್ ದಿನದಾಟದ ಬಳಿಕ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :