ಟಿ20 ಶ್ರೇಯಾಂಕದಲ್ಲಿ ಟಾಪ್ ಸ್ಥಾನ ಕಳೆದುಕೊಂಡ ಕೆಎಲ್ ರಾಹುಲ್, ಬಾಬರ್ ಅಜಮ್

ದುಬೈ| Krishnaveni K| Last Modified ಗುರುವಾರ, 10 ಸೆಪ್ಟಂಬರ್ 2020 (10:19 IST)
ದುಬೈ: ಕಳೆದ ಕೆಲವು ಸಮಯದಿಂದ ಕ್ರಿಕೆಟ್ ಅಂಕಣಕ್ಕೇ ಇಳಿಯದ ಕೆಎಲ್ ರಾಹುಲ್ ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರೀ ಕುಸಿತ ಕಂಡಿದ್ದಾರೆ.

 
ಇದುವರೆಗೆ ಪಾಕ್ ಬ್ಯಾಟ್ಸ್ ಮನ್ ಬಾಬರ್ ಅಜಮ್ ನಂ.1 ಸ್ಥಾನದಲ್ಲಿದ್ದರು. ಇದೀಗ ಅವರೂ ಕುಸಿತ ಕಂಡಿದ್ದು, ಇಂಗ್ಲೆಂಡ್ ಬ್ಯಾಟ್ಸ್ ಮನ್ ಡೇವಿಡ್ ಮಲನ್ ಅಗ್ರಸ್ಥಾನಕ್ಕೇರಿದ್ದಾರೆ. 2 ನೇ ಸ್ಥಾನದಲ್ಲಿದ್ದ ರಾಹುಲ್ 2 ಸ್ಥಾನ ಕುಸಿತ ಕಂಡು ನಾಲ್ಕನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂದು ಸ್ಥಾನ ಮೇಲೇರಿದ್ದು 9 ನೇ ರ್ಯಾಂಕ್ ಪಡೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :