Widgets Magazine

ತಪ್ಪುಗಳನ್ನು ತಿದ್ದಿಕೊಳ್ಳಲು ಕಲಿತದ್ದಕ್ಕೇ ಒಳ್ಳೆಯ ಆಟಗಾರನಾದರಂತೆ ಹಾರ್ದಿಕ್ ಪಾಂಡ್ಯ

Mumbai| Krishnaveni K| Last Modified ಬುಧವಾರ, 25 ಜನವರಿ 2017 (09:02 IST)
ಮುಂಬೈ:

ತಪ್ಪುಗಳಿಂದ ಪಾಠ ಕಲಿಯಲು ಕಲಿತದ್ದಕ್ಕೇ ತಾನಿಂದು ಯಶಸ್ಸು ಪಡೆಯಲು ಸಾಧ್ಯವಾಗಿದೆ ಎಂದು ಹಾರ್ದಿಕ್ ಹೇಳಿಕೊಂಡಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಭಾರತ ಎ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದೇ ತಿರುವಿಗೆ ಕಾರಣವಾಯಿತು. ಅಲ್ಲಿ ನಾನುಕೋಚ್

ರಾಹುಲ್ ದ್ರಾವಿಡ್ ಬಳಿ ಸಾಕಷ್ಟು ಕಲಿತೆ. ಅದರಿಂದಲೇ ನನ್ನ ವೃತ್ತಿ ಜೀವನ ಸುಧಾರಿಸಿತು ಎಂದು ಹಾರ್ದಿಕ್ ಸ್ಮರಿಸುತ್ತಾರೆ.ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಪಂದ್ಯಕ್ಕೆ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂಎಸ್ ಧೋನಿಯಂತೇ ವಿರಾಟ್ ಕೊಹ್ಲಿ ಕೂಡಾ ನನ್ನಂತಹ ಯುವ ಬೌಲರ್ ಗಳಲ್ಲಿ ಆತ್ಮ ವಿಶ್ವಾಸ ತುಂಬುತ್ತಾರೆ. ಇವರಿಬ್ಬರ ನಾಯಕತ್ವದಲ್ಲಿ ವ್ಯತ್ಯಾಸವೇನಿಲ್ಲ. ಇಬ್ಬರೂ ಉತ್ತಮ ಮಾರ್ಗದರ್ಶಕರು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :