Widgets Magazine

ಆಶ್ರಿತಾ ಶೆಟ್ಟಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಮನೀಶ್ ಪಾಂಡೆ

ಮುಂಬೈ| Krishnaveni K| Last Modified ಸೋಮವಾರ, 2 ಡಿಸೆಂಬರ್ 2019 (16:08 IST)
ಮುಂಬೈ: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ನಾಯಕ ಮನೀಶ್ ಪಾಂಡೆ ಇಂದು ತಮ್ಮ ಬಹುಕಾಲದ ಗೆಳತಿ ಆಶ್ರಿತಾ ಶೆಟ್ಟಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

 
ನಿನ್ನೆಯಷ್ಟೇ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅರ್ಧಶತಕ ಗಳಿಸಿ ಕರ್ನಾಟಕದ ಫೈನಲ್ ಗೆಲುವಿನ ರೂವಾರಿಯಾಗಿದ್ದ ಮನೀಶ್ ಇಂದು ಆಶ್ರಿತಾ ಜತೆ ಸಪ್ತಪದಿ ತುಳಿದಿದ್ದಾರೆ.
 
ಮುಂಬೈನಲ್ಲಿ ಆಪ್ತೇಷ್ಟರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆದಿದೆ. ಈ ಫೋಟೋಗಳನ್ನು ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ಫ್ರಾಂಚೈಸಿ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ.
ಇದರಲ್ಲಿ ಇನ್ನಷ್ಟು ಓದಿ :