ಧೋನಿಯನ್ನು ಬಿಟ್ಟು ಮುಂದೆ ನಡೆದಿದ್ದೇವೆ: ಮುಖ್ಯ ಆಯ್ಕೆಗಾರ ಎಂಎಸ್ ಕೆ ಪ್ರಸಾದ್

ಮುಂಬೈ| Krishnaveni K| Last Modified ಶುಕ್ರವಾರ, 25 ಅಕ್ಟೋಬರ್ 2019 (09:57 IST)
ಮುಂಬೈ: ವಿಶ್ವಕಪ್ ಬಳಿಕ ಟೀಂ ಇಂಡಿಯಾ ಆಡುವ ಪ್ರತೀ ಟೂರ್ನಮೆಂಟ್ ಗೂ ಮುನ್ನ ಧೋನಿ ಕತೆ ಏನು ಎಂಬ ಪ್ರಶ್ನೆ ಬಂದೇ ಬರುತ್ತಿದೆ. ಇದೇ ಪ್ರಶ್ನೆ ನಿನ್ನೆ ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಿದಾಗಲೂ ಬಂದಿದೆ. ಇದಕ್ಕೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

 
ನಾವು ಧೋನಿಯನ್ನು ಬಿಟ್ಟು ಮುಂದೆ ನಡೆದಿದ್ದೇವೆ. ರಿಷಬ್ ಪಂತ್ ಉತ್ತಮವಾಗಿ ಆಡುತ್ತಿದ್ದಾರೆ. ಪ್ರತಿಭಾವಂತ ಸಂಜು ಸ್ಯಾಮ್ಸನ್ ರನ್ನೂ ತಂಡಕ್ಕೆ ಸೇರಿಸಿಕೊಂಡಿದ್ದೇವೆ. ಈಗ ನಮ್ಮ ಉದ್ದೇಶ ನಿಮಗೆ ಅರ್ಥವಾಗಿರಬೇಕು. ಇನ್ನೂ, ಪದೇ ಪದೇ ಧೋನಿ ಬಗ್ಗೆಯೇ ಕೇಳುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಪ್ರಸಾದ್ ಹೇಳಿದ್ದಾರೆ.
 
ಈ ಮೂಲಕ ಆಯ್ಕೆ ಸಮಿತಿಯಲ್ಲಿ ಧೋನಿ ಹೆಸರನ್ನು ಪರಿಗಣಿಸಿಯೇ ಇಲ್ಲ. ಹಾಗೂ ಭವಿಷ್ಯದ ದೃಷ್ಟಿಯಿಂದ ಧೋನಿಯನ್ನು ಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :