ಮಾಸ್ಕ್ ಹಂಚಿಕೆಯಲ್ಲಿ ತೊಡಗಿರುವ ಕ್ರಿಕೆಟಿಗ ಪಠಾಣ್ ಬ್ರದರ್ಸ್

ನವದೆಹಲಿ| Krishnaveni K| Last Modified ಗುರುವಾರ, 26 ಮಾರ್ಚ್ 2020 (09:30 IST)
ನವದೆಹಲಿ: ದೇಶವಿಡೀ ಕೊರೋನಾ ಭಯದಲ್ಲಿದ್ದರೆ ಸೆಲೆಬ್ರಿಟಿಗಳು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತ ಕ್ರಿಕೆಟಿಗ ಇರ್ಫಾನ್ ಪಠಾಣ್ ಮತ್ತು ಸಹೋದರ ಯೂಸುಫ್ ಪಠಾಣ್ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
 

ಕೊರೋನಾ ಬಂದ ಬಳಿಕ ದೇಶದಲ್ಲಿ ಮಾಸ್ಕ್, ಸ್ಯಾನಿಟೈಸರ್ ಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಜತೆಗೆ ಬೆಲೆಯೂ ಹೆಚ್ಚಳವಾಗಿದ್ದು, ಬಡವರಿಗೆ ಕೊಳ್ಳಲು ಆಗದ ಸ್ಥಿತಿಯಿದೆ.
 
ಹೀಗಾಗಿ ಪಠಾಣ್ ಸಹೋದರರು ಈಗ ಮಾಸ್ಕ್ ಹಂಚಿಕೆಯಲ್ಲಿ ತೊಡಗಿದ್ದಾರೆ. ತಮ್ಮ ಕೈಲಾದಷ್ಟು ಜನರಿಗೆ ಮುಂದೆಯೂ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :