ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಬಲೆಗೆ ಬಿದ್ದ ಆ ಸುಂದರಿ ಯಾರು?

ಮುಂಬೈ| Krishnaveni K| Last Modified ಗುರುವಾರ, 10 ಸೆಪ್ಟಂಬರ್ 2020 (12:59 IST)
ಮುಂಬೈ: ಟೀಂ ಇಂಡಿಯಾದ ಭವಿಷ್ಯದ ಕ್ರಿಕೆಟಿಗ ಪೃಥ್ವಿ ಶಾ ವೃತ್ತಿ ಜೀವನದಲ್ಲಿ ಮಿಂಚುತ್ತಿರುವ ಬೆನ್ನಲ್ಲೇ ನಟಿಯೊಬ್ಬರ ಜತೆ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಇಂತಹದ್ದೊಂದು ಊಹಾಪೋಹಕ್ಕೆ ಕಾರಣವಾಗಿರುವುದು ಅವರ ಇತ್ತೀಚೆಗಿನ ಇನ್ ಸ್ಟಾಗ್ರಾಂ ಪೋಸ್ಟ್ ಗಳು.

 
ಪೃಥ್ವಿ ಶಾ ಇನ್ ಸ್ಟಾಗ್ರಾಂ ಪುಟದಲ್ಲಿ ಇತ್ತೀಚೆಗೆ ಪ್ರಕಟಿಸುತ್ತಿರುವ ಫೋಟೋ, ವಿಡಿಯೋಗಳಿಗೆ ನಟಿ ಪ್ರಚಿ ದೇಸಾಯಿ ಸತತವಾಗಿ ಲವ್ ಇಮೋಜಿ ಇತ್ಯಾದಿಯಾಗಿ ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪೃಥ‍್ವಿ ಕೂಡಾ ನಿಯತ್ತಾಗಿ ಪ್ರತಿಕ್ರಿಯಿಸುತ್ತಾರೆ. ಇದನ್ನು ನೋಡಿ ಪೃಥ್ವಿ ನಟಿಯ ಪ್ರೇಮ ಪಾಶಕ್ಕೆ ಬಿದ್ದಿದ್ದಾರಾ ಎಂಬ ಅನುಮಾನ ಮೂಡಿದೆ. ಆದರೆ ಈ ಬಗ್ಗೆ ಇಬ್ಬರೂ ಅಧಿಕೃತ ಹೇಳಿಕೆ ನೀಡಿಲ್ಲ.
ಇದರಲ್ಲಿ ಇನ್ನಷ್ಟು ಓದಿ :