ಅಧ್ಯಕ್ಷರಾಗುತ್ತಿದ್ದಂತೇ ಗಂಗೂಲಿ ಜತೆ ಕಿತ್ತಾಟ ಮರೆತು ಭರಪೂರ ಹೊಗಳಿದ ರವಿಶಾಸ್ತ್ರಿ

ಮುಂಬೈ| Krishnaveni K| Last Modified ಭಾನುವಾರ, 27 ಅಕ್ಟೋಬರ್ 2019 (09:00 IST)
ಮುಂಬೈ: ಅಧಿಕಾರವಿದ್ದಾಗ ಶತ್ರುಗಳೂ ಮಿತ್ರರಾಗುತ್ತಾರೆ ಎಂಬುದು ಅಧ‍್ಯಕ್ಷ ಸೌರವ್ ಗಂಗೂಲಿ ಮತ್ತು ರವಿಶಾಸ್ತ್ರಿ ವಿಚಾರದಲ್ಲೂ ಸತ್ಯವಾಗಿದೆ.

 
ಕೋಚ್ ಆಯ್ಕೆ ಪ್ರಕ್ರಿಯೆ ಸಂದರ್ಭ ರವಿಶಾಸ್ತ್ರಿ ಮತ್ತು ಅಂದು ಆಯ್ಕೆ ಸಮಿತಿ ಸದಸ್ಯರಾಗಿದ್ದ ಸೌರವ್ ಗಂಗೂಲಿ ನಡುವೆ ಕಿತ್ತಾಟ ನಡೆದಿತ್ತು. ಗಂಗೂಲಿ ಅಧ್ಯಕ್ಷರಾದ ಸುದ್ದಿ ತಿಳಿದ ಕೂಡಲೇ ಟ್ವಿಟರಿಗರೂ ಮೊದಲು ಕೋಚ್ ರವಿಶಾಸ್ತ್ರಿಯನ್ನು ಕಿತ್ತು ಹಾಕಿ ಎಂದು ಟಾಂಗ್ ಕೊಟ್ಟಿದ್ದರು.
 
ಆದರೆ ಇದೀಗ ಗಂಗೂಲಿ ಅಧ‍್ಯಕ್ಷರಾಗಿರುವುದರ ಬಗ್ಗೆ ರವಿಶಾಸ್ತ್ರಿಯನ್ನು ಕೇಳಿದಾಗ ‘ಗಂಗೂಲಿಗೆ ನಾಯಕತ್ವ ಎನ್ನುವುದು ಸ್ವಾಭಾವಿಕವಾಗಿ ಬಂದಿದೆ. ಅವರ ಆಯ್ಕೆ ಭಾರತೀಯ ಕ್ರಿಕೆಟ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಇದು ಭಾರತೀಯ ಕ್ರಿಕೆಟ್ ಗೇ ಸಂದ ಗೆಲುವು’ ಎಂದು ರವಿಶಾಸ್ತ್ರಿ ಭರಪೂರ ಹೊಗಳಿಕೆಯಿತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :