ಕೊನೆಗೂ ವಿರಾಟ್ ಕೊಹ್ಲಿ ಜತೆಗಿನ ಮನಸ್ತಾಪದ ವರದಿ ಬಗ್ಗೆ ಬಾಯ್ಬಿಟ್ಟ ರೋಹಿತ್ ಶರ್ಮಾ

ಮುಂಬೈ| Krishnaveni K| Last Modified ಮಂಗಳವಾರ, 7 ಜನವರಿ 2020 (10:00 IST)
ಮುಂಬೈ: ವಿಶ್ವಕಪ್ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಮುಸುಕಿನ ಗುದ್ದಾಟ ಜೋರಾಗಿದೆ ಎಂಬ ವರದಿಗಳ ಬಗ್ಗೆ ಇದೀಗ ರೋಹಿತ್ ಶರ್ಮಾ ಬಾಯ್ಬಿಟ್ಟಿದ್ದಾರೆ.

 
ಇದಕ್ಕೂ ಮೊದಲೇ ಕೊಹ್ಲಿ ಹಾಗೂ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಇಂತಹ ವರದಿಗಳೆಲ್ಲಾ ಶುದ್ಧ ಆಧಾರ ರಹಿತ ಎಂದು ತಳ್ಳಿ ಹಾಕಿದ್ದರು. ಈಗ ರೋಹಿತ್ ಶರ್ಮಾ ಸಂದರ್ಶನವೊಂದದರಲ್ಲಿ ಇದರ ಬಗ್ಗೆ ಮಾತನಾಡಿದ್ದಾರೆ.
 
‘ಈ ಮನಸ್ತಾಪದ ವರದಿ ನಡುವೆ ನನ್ನ ಕುಟುಂಬವನ್ನೂ ವಿವಾದಕ್ಕೆ ಎಳೆದುತರಲಾಯಿತು. ಇದು ನಿಜಕ್ಕೂ ನನಗೆ ಬೇಸರ ತರಿಸಿತು. ನಮ್ಮ ಕುಟುಂಬದವರು ನಮಗೆ ಯಾವತ್ತೂ ಬೆನ್ನುಲುಬಾಗಿರುತ್ತಾರೆ. ನಮ್ಮ ವೃತ್ತಿ ಜೀವನಕ್ಕೂ ಅವರಿಗೂ ಸಂಬಂಧವಿಲ್ಲ. ಬಹುಶಃ ವಿರಾಟ್ ಕೊಹ್ಲಿಗೂ ಇದೇ ರೀತಿ ಅನಿಸಿರಬಹುದು. ನಮ್ಮ ಕುಟುಂಬ ನಮಗೆ ದೊಡ್ಡದು. ಈ ವಿವಾದದಲ್ಲಿ ಅವರನ್ನು ಎಳೆದುತರಬಾರದಿತ್ತು’ ಎಂದು ರೋಹಿತ್ ಹೇಳಿಕೊಂಡಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :