Widgets Magazine

ಧೋನಿ ನಿವೃತ್ತಿ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು ಗೊತ್ತಾ?

ಮುಂಬೈ| Krishnaveni K| Last Modified ಶುಕ್ರವಾರ, 1 ನವೆಂಬರ್ 2019 (08:53 IST)
ಮುಂಬೈ: ಭಾರತೀಯ ಕ್ರಿಕೆಟ್ ರಂಗದ ಯಾರೇ ಎಲ್ಲೇ ಸಿಕ್ಕರೂ ಈಗ ಎದುರಾಗುವ ಪ್ರಶ್ನೆ ಧೋನಿ ನಿವೃತ್ತಿಯ ಬಗ್ಗೆಯೇ ಆಗಿರುತ್ತದೆ. ಈ ಬಗ್ಗೆ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

 
ಧೋನಿ ನಿವೃತ್ತಿ ಬಗ್ಗೆ ಎದ್ದಿರುವ ಊಹಾಪೋಹಗಳ ಬಗ್ಗೆ ರೋಹಿತ್ ಶರ್ಮಾಗೆ ಮಾಧ‍್ಯಮಗಳು ಪ್ರಶ್ನಿಸಿದಾಗ ಅವರು ಇವೆಲ್ಲಾ ನೀವೇ ಸೃಷ್ಟಿಸಿಕೊಂಡ ರೂಮರ್ ಗಳು ಎಂದಿದ್ದಾರೆ.
 
‘ನಮಗೆ ಯಾರಿಗೂ ಇಂತಹ ಸುದ್ದಿ ಸಿಕ್ಕಿಲ್ಲ. ಇದೆಲ್ಲಾ ನೀವೇ ಸೃಷ್ಟಿಸಿಕೊಂಡಿರುವುದು. ಧೋನಿ ನಿವೃತ್ತಿ ಬಗ್ಗೆ ನಾವು ಕೇಳಿಯೇ ಇಲ್ಲ’ ಎಂದು ಬಾಂಗ್ಲಾ ಟಿ20 ಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :