Widgets Magazine

ಐಪಿಎಲ್ ಅಲ್ಲ, ವಿರಾಟ್ ಕೊಹ್ಲಿ, ಇಂಗ್ಲೆಂಡ್ ಹವಾಗುಣ ಟೀಂ ಇಂಡಿಯಾ ವಿಶ್ವಕಪ್ ತಂಡ ನಿರ್ಧರಿಸುತ್ತೆ ಎಂದ ರೋಹಿತ್ ಶರ್ಮಾ

ಮುಂಬೈ| Krishnaveni K| Last Modified ಶನಿವಾರ, 6 ಏಪ್ರಿಲ್ 2019 (09:07 IST)
ಮುಂಬೈ: ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ ಗೆ ಆಯ್ಕೆಯಾಗಲಿರುವ ಭಾರತ ತಂಡವನ್ನು ಕೂಡಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಿದ್ದವರಿಗೆ ಉಪನಾಯಕ ರೋಹಿತ್ ಶರ್ಮಾ ಶಾಕ್ ಕೊಟ್ಟಿದ್ದಾರೆ.
 
ವಿಶ್ವಕಪ್ ಆಡಲಿರುವ ಟೀಂ ಇಂಡಿಯಾವನ್ನು ನಿರ್ಧರಿಸುವುದು ಐಪಿಎಲ್ ಅಲ್ಲ. ಇಂಗ್ಲೆಂಡ್ ಹವಾಗುಣಕ್ಕೆ ಅನುಗುಣವಾಗಿ ಮತ್ತು ವಿರಾಟ್ ಕೊಹ್ಲಿಯ ಅಭಿಪ್ರಾಯದಂತೆ ತಂಡದ ಆಯ್ಕೆ ನಡೆಯಲಿದೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ.
 
ಈ ಹಿಂದೆ ಕೊಹ್ಲಿ ಕೂಡಾ ಇದನ್ನೇ ಹೇಳಿದ್ದರು. ಐಪಿಎಲ್ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಮಾನದಂಡವಲ್ಲ. ಒಂದೆರಡು ಸ್ಥಾನಗಳಿಗೆ ಆಟಗಾರರನ್ನು ನಿರ್ಧರಿಸಬೇಕಷ್ಟೇ. ಅದರ ಹೊರತಾಗಿ ಟೀಂ ಇಂಡಿಯಾ ವಿಶ್ವಕಪ್ ತಂಡ ಹೆಚ್ಚು ಕಡಿಮೆ ಫೈನಲ್ ಆಗಿದೆ ಎಂದು ಕೊಹ್ಲಿ ಹೇಳಿದ್ದರು. ಈಗ ರೋಹಿತ್ ಕೂಡಾ ಅದನ್ನೇ ಪುನರುಚ್ಚರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :