ಕ್ರಿಸ್ ಗೇಲ್ ಎದುರಲ್ಲೇ ಅವರದೇ ದಾಖಲೆ ಮುರಿಯಲು ಸಜ್ಜಾಗಿರುವ ರೋಹಿತ್ ಶರ್ಮಾ

ಫ್ಲೋರಿಡಾ| Krishnaveni K| Last Modified ಶನಿವಾರ, 3 ಆಗಸ್ಟ್ 2019 (09:31 IST)
ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೊದಲ ಟಿ20 ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ವಿಶ್ವ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.

 
ವಿಶೇಷವೆಂದರೆ ರೋಹಿತ್ ಮುರಿಯಲಿರುವುದು ವಿಂಡೀಸ್ ನವರೇ ಆದ ಕ್ರಿಸ್ ಗೇಲ್ ದಾಖಲೆಯನ್ನು. ಯೂನಿವರ್ಸಲ್ ಬಾಸ್ ಗೇಲ್ ದಾಖಲೆಯನ್ನು ಅವರದೇ ಎದುರು ಮುರಿಯುವ ಉತ್ಸಾಹದಲ್ಲಿ ಹಿಟ್ ಮ್ಯಾನ್ ರೋಹಿತ್ ಇದ್ದಾರೆ.
 
ರೋಹಿತ್ ಶರ್ಮಾ ಈಗ ಟಿ20 ಪಂದ್ಯಗಳಲ್ಲಿ 102 ಸಿಕ್ಸರ್ ಸಿಡಿಸಿದ್ದು ಇನ್ನು ನಾಲ್ಕು ಸಿಕ್ಸರ್ ಸಿಡಿಸಿದರೆ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಕ್ರಿಸ್ ಗೇಲ್ ದಾಖಲೆ ಮುರಿಯಲಿದ್ದಾರೆ. ಸದ್ಯದ ಫಾರ್ಮ್‍ ಗಮನಿಸಿದರೆ ರೋಹಿತ್ ಗೆ ಇದು ಕಷ್ಟವೇನೂ ಅಲ್ಲ.
ಇದರಲ್ಲಿ ಇನ್ನಷ್ಟು ಓದಿ :