ಮೊನ್ನೆ ಬ್ಯಾಟಿಂಗ್ ನಲ್ಲಿ, ಇದೀಗ ಫೀಲ್ಡಿಂಗ್ ನಲ್ಲಿ ರೋಹಿತ್ ಶರ್ಮಾ ಮ್ಯಾಜಿಕ್!

ದುಬೈ| Krishnaveni K| Last Modified ಭಾನುವಾರ, 13 ಸೆಪ್ಟಂಬರ್ 2020 (10:00 IST)
ದುಬೈ: ಐಪಿಎಲ್ 13 ಗೆ ತಯಾರಿ ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ನೆಟ್ ಪ್ರಾಕ್ಟೀಸ್ ಸಂದರ್ಭದಲ್ಲಿ ಒಂದೇ ಕೈಯಿಂದ ಕ್ಯಾಚ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 
ರೋಹಿತ್ ಮೊನ್ನೆಯಷ್ಟೇ ಬ್ಯಾಟಿಂಗ್ ಅಭ್ಯಾಸದ ವೇಳೆ ಭರ್ಜರಿ ಸಿಕ್ಸರ್ ಸಿಡಿಸಿದ್ದು, ಮೈದಾನದಿಂದ ಹೊರಗೆ ಹೋಗಿ ಬಸ್ ಒಂದಕ್ಕೆ ಬಿದ್ದು ಸುದ್ದಿಯಾಗಿತ್ತು. ಇದೀಗ ಒಂದೇ ಕೈಯಿಂದ ಹಾರಿ ಕ್ಯಾಚ್ ಹಿಡಿದು ಫೀಲ್ಡಿಂಗ್ ನಲ್ಲೂ ತಾವು ಸೈ ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬಹಳ ದಿನಗಳ ನಂತರ ಕ್ರಿಕೆಟ್ ಆಡಲಿಳಿದರೂ ರೋಹಿತ್ ಅದೇ ಫಾರ್ಮ್ ಉಳಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸವುಂಟು ಮಾಡಿದೆ.
ಇದರಲ್ಲಿ ಇನ್ನಷ್ಟು ಓದಿ :