ಇದೇನು ಫಸ್ಟ್ ಕ್ಲಾಸ್ ಕ್ರಿಕೆಟ್ಟಾ?! ರೋಹಿತ್ ಶರ್ಮಾ ಆಕ್ರೋಶಗೊಂಡಿದ್ದೇಕೆ?!

ಮುಂಬೈ| Krishnaveni K| Last Modified ಶನಿವಾರ, 11 ಜನವರಿ 2020 (09:09 IST)
ಮುಂಬೈ: ಐಸಿಸಿ ಜಾರಿಗೆ ತಂದಿರುವ  ನಾಲ್ಕು ದಿನಗಳ ಟೆಸ್ಟ್ ಪಂದ್ಯಕ್ಕೆ ವಿಶ್ವದ ಹಲವು ಕ್ರಿಕೆಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದು, ಭಾರತೀಯ ಕ್ರಿಕೆಟಿಗರೂ ಧ್ವನಿಗೂಡಿಸಿದ್ದಾರೆ.
 

ಸ್ವತಃ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ನಾಲ್ಕು ದಿನಗಳಿಗೆ ಟೆಸ್ಟ್ ಪಂದ್ಯವನ್ನು ಇಳಿಕೆ ಮಾಡಿರುವ ಐಸಿಸಿ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಹಲವು ಕ್ರಿಕೆಟಿಗರೂ ತಮ್ಮ ವಿರೋಧ ವ್ಯಕ್ತಪಡಿಸಿದ್ದರು.
 
ಇದೀಗ ಆರಂಭಿಕ ರೋಹಿತ್ ಶರ್ಮಾ ಕೂಡಾ ಐಸಿಸಿ ನಿರ್ಧಾರವನ್ನು ವಿರೋಧಿಸಿದ್ದಾರೆ. ನಾಲ್ಕು ದಿನಗಳ ಪಂದ್ಯವಾಡಲು ಇದೇನು ಫಸ್ಟ್ ಕ್ಲಾಸ್ ಕ್ರಿಕೆಟಾ ಎಂದು ಅವರು ಪ್ರಶ್ನಿಸಿದ್ದಾರೆ. ಇಂದು ನಾಲ್ಕು ದಿನದ ಟೆಸ್ಟ್ ಎನ್ನುತ್ತೀರಿ, ಮುಂದೊಂದು ದಿನ ಮೂರು ದಿನಕ್ಕೆ ಇಳಿಸುತ್ತೀರಿ. ಹೀಗೇ ಆದರೆ ಮುಂದೊಂದು ದಿನ ಟೆಸ್ಟ್ ಪಂದ್ಯವನ್ನೇ ಇಲ್ಲವಾಗಿಸುತ್ತೀರಿ. ಇದಕ್ಕೆ ಕೊನೆಯೆಂದು? ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ನಲ್ಲಿ ನಾಲ್ಕು ದಿನಗಳ ಟೆಸ್ಟ್ ಆಡಲು ಸಾಧ‍್ಯವಿಲ್ಲ ಎಂದು ರೋಹಿತ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :