ಸನತ್ ಜಯಸೂರ್ಯರ 22 ವರ್ಷದ ದಾಖಲೆಗೆ ಬ್ರೇಕ್ ಹಾಕಲಿರುವ ರೋಹಿತ್ ಶರ್ಮಾ

ಕಟಕ್| Krishnaveni K| Last Modified ಭಾನುವಾರ, 22 ಡಿಸೆಂಬರ್ 2019 (09:12 IST)
ಕಟಕ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ನಡೆಯಲಿರುವ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಶ್ರೀಲಂಕಾ ದಿಗ್ಗಜ ಸನತ್ ಜಯಸೂರ್ಯರ ದಾಖಲೆಯೊಂದನ್ನು ಮುರಿಯುವ ಅವಕಾಶ ಹೊಂದಿದ್ದಾರೆ.
 

ಇನ್ನು 9 ರನ್ ಗಳಿಸಿದರೆ ರೋಹಿತ್ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆರಂಭಿಕ ಎನ್ನುವ ಜಯಸೂರ್ಯ ದಾಖಲೆಯನ್ನು ಮುರಿಯಲಿದ್ದಾರೆ.
 
2019 ನೇ ಸಾಲಿನಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಮಾಡಿರುವ ರೋಹಿತ್ ಇದೀಗ ಮೂರೂ ಮಾದರಿ ಕ್ರಿಕೆಟ್ ನಿಂದ ಒಟ್ಟು 2.379 ರನ್ ಗಳಿಸಿದ್ದಾರೆ. 1999 ರಲ್ಲಿ ಜಯಸೂರ್ಯ ಒಂದೇ ವರ್ಷದಲ್ಲಿ ಮೂರೂ ಮಾದರಿ ಕ್ರಿಕೆಟ್ ನಿಂದ 2,387 ರನ್ ಗಳಿಸಿ ದಾಖಲೆ ಮಾಡಿದ್ದರು. ರೋಹಿತ್ ಇನ್ನು 9 ರನ್ ಗಳಿಸಿದರೆ ಆ ದಾಖಲೆ ಮುರಿಯಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :