ಸೌರವ್ ಗಂಗೂಲಿ ನಿರ್ಧಾರಕ್ಕೆ ಸಚಿನ್ ತೆಂಡುಲ್ಕರ್ ಬೆಂಬಲ

ಮುಂಬೈ| Krishnaveni K| Last Modified ಶುಕ್ರವಾರ, 1 ನವೆಂಬರ್ 2019 (08:44 IST)
ಮುಂಬೈ: ಭಾರತವೂ ಡೇ ಆಂಡ್ ನೈಟ್ ಟೆಸ್ಟ್ ಪಂದ್ಯವಾಡಬೇಕು ಎಂಬ ಕನಸನ್ನು ಸೌರವ್ ಗಂಗೂಲಿ ಬಿಸಿಸಿಐ ಅಧ‍್ಯಕ್ಷರಾದ ಬೆನ್ನಲ್ಲೇ ಪೂರೈಸಿಕೊಳ್ಳುತ್ತಿದ್ದಾರೆ.

 
ನವಂಬರ್ 22 ರಿಂದ ಕೋಲ್ಕೊತ್ತಾದಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯ ಹಗಲು ರಾತ್ರಿ ನಡೆಯಲಿದ್ದು, ಈ ಮೂಲಕ ಎರಡೂ ತಂಡಗಳು ಚೊಚ್ಚಲ ಡೇ ಆಂಡ್ ನೈಟ್ ಟೆಸ್ಟ್ ಆಡಲಿದೆ.
 
ಗಂಗೂಲಿ ಈ ಕುರಿತಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಂಗ್ಲಾ ಕ್ರಿಕೆಟ್ ಮಂಡಳಿಯನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಂಗೂಲಿಯ ಈ ನಡೆಗೆ ಅವರ ಸಾಥಿ ಸಚಿನ್ ತೆಂಡುಲ್ಕರ್ ಸಹಮತ ವ್ಯಕ್ತಪಡಿಸಿದ್ದಾರೆ. ಹಗಲು ರಾತ್ರಿ ಟೆಸ್ಟ್ ಪಂದ್ಯ ಒಂದು ಉತ್ತಮ ಪ್ರಯೋಗ ಎಂದು ಸಚಿನ್ ಕೊಂಡಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :