ವಿರಾಟ್ ಕೊಹ್ಲಿ ಬಳಿಕ ಐಸಿಸಿಯ ಈ ನಿರ್ಧಾರಕ್ಕೆ ಸಚಿನ್ ವಿರೋಧ

ದುಬೈ| Krishnaveni K| Last Modified ಸೋಮವಾರ, 6 ಜನವರಿ 2020 (10:00 IST)
ದುಬೈ: ಐಸಿಸಿ ಇತ್ತೀಚೆಗೆ ಮುಂದಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ನ ರೋಚಕತೆ ಹೆಚ್ಚಿಸಲು ಐದು ದಿನದ ಬದಲಿಗೆ ನಾಲ್ಕು ದಿನಗಳಿಗೆ ಕಡಿತ ಮಾಡಿರುವ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
 

ಮೊನ್ನೆಯಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಪ್ರಯೋಗವನ್ನು ವಿರೋಧಿಸಿದ್ದರು. ಟೆಸ್ಟ್ ಕ್ರಿಕೆಟ್ ನ್ನು ಹಗಲು ರಾತ್ರಿ ನಡೆಸುವುದೇ ಮಾಡಬಹುದಾದ ಗರಿಷ್ಠ ಬದಲಾವಣೆ. ಅದರ ಬದಲಾಗಿ ನೀವು ಏನನ್ನು ಬಯಸುತ್ತೀರಿ ಎಂದು ಕಿಡಿ ಕಾರಿದ್ದರು.
 
ಇದೀಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡಾ ನಾಲ್ಕು ದಿನಗಳ ಟೆಸ್ಟ್ ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ನ ಅತಿ ಶುದ್ಧರೂಪ ಟೆಸ್ಟ್ ಕ್ರಿಕೆಟ್. ಇದನ್ನು ಕುಲಗೆಡಿಸಬೇಡಿ. ಏಕದಿನ, ಟಿ20, ಟಿ10 ಕ್ರಿಕೆಟ್ ಎಲ್ಲವನ್ನೂ ಜಾರಿಗೆ ತಂದಿರಿ. ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಯಾವುದೇ ಬದಲಾವಣೆ ಮಾಡಬೇಡಿ. ಅದನ್ನು ಹಾಗೆಯೇ ಬಿಡಿ ಎಂದು ಸಚಿನ್ ವಿರೋಧ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :