ವಿಶ್ವಕಪ್ ವೇಳೆ ಭಾರತೀಯ ಆಯ್ಕೆ ಸಮಿತಿ ಸದಸ್ಯರು ಅನುಷ್ಕಾ ಶರ್ಮಾಗೆ ಟೀ ಸಪ್ಲೈ ಮಾಡುತ್ತಿದ್ದರು!

ಮುಂಬೈ| Krishnaveni K| Last Modified ಗುರುವಾರ, 31 ಅಕ್ಟೋಬರ್ 2019 (17:17 IST)
ಮುಂಬೈ: ಭಾರತೀಯ ಕ್ರಿಕೆಟ್‍ನ ಆಯ್ಕೆ ಸಮಿತಿ ಬಗ್ಗೆ ಮಾಜಿ ಕ್ರಿಕೆಟಿಗ ಫಾರುಖ್ ಇಂಜಿನಿಯರ್ ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿದ್ದಾರೆ.

 
ಸೌರವ್ ಗಂಗೂಲಿ ಅಧ್ಯಕ್ಷರಾಗಿ ನೇಮಕಗೊಂಡಿರುವುದನ್ನು ಸ್ವಾಗತಿಸಿರುವ ಇಂಜಿನಿಯರ್ ಇದಕ್ಕಿಂತ ಮೊದಲು ಇದ್ದ ಆಡಳಿತ ಮಂಡಳಿ ಬಿಸಿಸಿಐ ದುಡ್ಡಿನಲ್ಲಿ ಮಜಾ ಮಾಡುತ್ತಿದ್ದರು. ಅವರ ಹನಿಮೂನ್ ಅವಧಿ ಈಗ ಮುಗಿದಿದೆ ಎಂದಿದ್ದಾರೆ.
 
ಅಷ್ಟೇ ಅಲ್ಲದೆ, ಆಯ್ಕೆ ಸಮಿತಿ ಮೇಲೆ ಕೆಂಡ ಕಾರಿರುವ ಇಂಜಿನಿಯರ್ 10-12 ಟೆಸ್ಟ್ ಆಡಿದ ಅನುಭವವಿರುವವರು ತಂಡದ ಆಯ್ಕೆ ಮಾಡುತ್ತಿದ್ದಾರೆ. ಇವರಿಗೆಲ್ಲಾ ಏನು ಅರ್ಹತೆ ಇದೆ? ಆಯ್ಕೆ ವಿಚಾರದಲ್ಲಿ ವಿರಾಟ್ ಕೊಹ್ಲಿಯದ್ದೇ ಮುಖ್ಯ ಪಾತ್ರ. ಅದರಲ್ಲೂ ವಿಶ್ವಕಪ್ ವೇಳೆ ಒಬ್ಬ ಆಯ್ಕೆ ಸಮಿತಿ ಸದಸ್ಯ ಭಾರತೀಯ ಸಮವಸ್ತ್ರದಲ್ಲಿದ್ದ. ಆತ ಯಾರು ಎಂದೇ ನನಗೆ ಗೊತ್ತಿರಲಿಲ್ಲ. ಇವರೆಲ್ಲಾ ವಿಶ್ವಕಪ್ ವೇಳೆ ವಿರಾಟ್ ಪತ್ನಿ ಅನುಷ್ಕಾಗೆ ಚಹಾ ಕಪ್ ಸರಬರಾಜು ಮಾಡುತ್ತಿದ್ದರು ಎಂದು ಫಾರುಖ್ ಇಂಜಿನಿಯರ್ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :