Widgets Magazine

ಐದನೇ ಹೆಣ್ಣು ಮಗುವಿಗೆ ತಂದೆಯಾದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ

ಇಸ್ಲಾಮಾಬಾದ್| Krishnaveni K| Last Modified ಶನಿವಾರ, 15 ಫೆಬ್ರವರಿ 2020 (10:55 IST)
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ತಮಗೆ ಐದನೇ ಬಾರಿಗೆ ಹೆಣ್ಣು ಮಗುವಾದ ಖುಷಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಈಗಾಗಲೇ ನಾಲ್ವರು ಹೆಣ್ಣು ಮಕ್ಕಳಿಗೆ ಪೋಷಕರಾಗಿರುವ ಅಫ್ರಿದಿ ದಂಪತಿಗೆ ಐದನೇ ಬಾರಿಯೂ ಹೆಣ್ಣು ಮಗುವಾಗಿದೆ. ಅದೂ ವಾಲೆಂಟೈನ್ಸ್ ಡೇ ದಿನವಾದ ನಿನ್ನೆ ಐದನೇ ಹೆಣ್ಣು ಮಗುವಿಗೆ ಅಫ್ರಿದಿ ಪತ್ನಿ ನಾಡಿಯಾ ಜನ್ಮ ನೀಡಿದ್ದಾರೆ.
 
ಎಲ್ಲಾ ದೇವರ ಕೃಪೆ. ಈ ಖುಷಿ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ಈಗಾಗಲೇ ನಮಗೆ ದೇವರು ನಾಲ್ವರು ಸುಂದರ ಹೆಣ್ಣು ಮಕ್ಕಳನ್ನು ಕರುಣಿಸಿದ್ದಾನೆ. ಇದೀಗ ಐದನೇ ಹೆಣ್ಣು ಮಗುವಿಗೆ ಪೋಷಕರಾಗುತ್ತಿದ್ದೇವೆ ಎಂದು ಅಫ್ರಿದಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :