ಪತ್ನಿ ಸಾನಿಯಾಗೆ ‘ಮಿಸ್ ಯೂ…’ ಎಂದ ಪತಿ ಶೊಯೇಬ್

ದುಬೈ| Krishnaveni| Last Modified ಶುಕ್ರವಾರ, 17 ನವೆಂಬರ್ 2017 (08:14 IST)
ದುಬೈ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪತಿ ಶೊಯೇಬ್ ಮಲಿಕ್ ಅವರ ನಡುವಿನ ಇಂಡೋ ಪಾಕ್ ಲವ್ ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದೀಗ ಪತಿ ಶೊಯೇಬ್ ಪತ್ನಿಯನ್ನು ಬಿಟ್ಟಿರಲಾರೆ ಎಂದು ಟ್ವೀಟ್ ಮಾಡಿದ್ದಾರೆ.
 
ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸಾನಿಯಾ ಮಿರ್ಜಾಗೆ ಶುಭಕೋರಿದ ಶೊಯೇಬ್ ದೂರದಲ್ಲಿರುವ ಪತ್ನಿಗೆ ಮಿಸ್ ಯೂ ಎಂದಿದ್ದಾರೆ.
 
‘ನನ್ನ ಸುಂದರ ಪತ್ನಿಗೆ  ಹುಟ್ಟುಹಬ್ಬದ ಶುಭಾಷಯಗಳು. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಶೊಯೇಬ್ ಟ್ವೀಟ್ ಮಾಡಿದ್ದಾರೆ. ಸದ್ಯ ಮಂಡಿನೋವಿಗೆ ತುತ್ತಾಗಿರುವ ಸಾನಿಯಾ ಕೆಲವು ದಿನಗಳಿಂದ ಅಂಕಣಕ್ಕಿಳಿದಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :