ಮತ್ತೆ ನಾಯಕ ಗಂಗೂಲಿಗೆ, ಉಪನಾಯಕರಾದ ರಾಹುಲ್ ದ್ರಾವಿಡ್!

ಬೆಂಗಳೂರು| Krishnaveni K| Last Modified ಗುರುವಾರ, 31 ಅಕ್ಟೋಬರ್ 2019 (09:31 IST)
ಬೆಂಗಳೂರು: ಒಂದು ಕಾಲದಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದಾಗ ಸೌರವ್ ಗಂಗೂಲಿಗೆ ಸಮರ್ಥ ಉಪನಾಯಕನಾಗಿ ಸಾಥ್ ಕೊಟ್ಟವರು ರಾಹುಲ್ ದ್ರಾವಿಡ್. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿರುವ ಗಂಗೂಲಿಗೆ ಅದೇ ದ್ರಾವಿಡ್ ಜತೆಯಾಗಿದ್ದಾರೆ.

 
ಭಾರತೀಯ ಕ್ರಿಕೆಟ್ ನ್ನು ಸುಧಾರಿಸಲು ಹಲವು ಕ್ರಮ ಕೈಗೊಳ್ಳಲುದ್ದೇಶಿಸಿರುವ ಗಂಗೂಲಿ ಮೊದಲನೆಯದಾಗಿ ನ್ಯಾಷನಲ್ ಕ್ರಿಕೆಟ್ ಅಕಾಡಮಿಯಿಂದಲೇ ಕೆಲಸ ಶುರು ಮಾಡಿದ್ದಾರೆ. ಸದ್ಯಕ್ಕೆ ಅಧ್ಯಕ್ಷರಾಗಿರುವುದು ರಾಹುಲ್ ದ್ರಾವಿಡ್. ಹೀಗಾಗಿ ಬೆಂಗಳೂರಿಗೆ ಬಂದಿರುವ ಗಂಗೂಲಿ ಸ್ವತಃ ದ್ರಾವಿಡ್ ಜತೆಗೂಡಿ ಎನ್ ಸಿಎ ಸುಧಾರಣೆಗೆ ಯಾವ ಕ್ರಮ ಕೈಗೊಳ್ಳಬಹುದು ಎಂದು ಚರ್ಚಿಸಿದ್ದಾರೆ.
 
ಯುವ ಕ್ರಿಕೆಟಿಗರನ್ನು ತರಬೇತು ಮಾಡುವ ಉದ್ದೇಶದಿಂದ ಸ್ಥಾಪಿತವಾಗಿರುವ ಎನ್ ಸಿಎ ಈಗ ಕೇವಲ ಪುನಶ್ಚೇತನ ಕೇಂದ್ರವಾಗಿ ಬದಲಾಗಿದೆ. ಇದಕ್ಕೆ ಮತ್ತೆ ಹಳೆಯ ಹೊಳಪು ನೀಡಲು ಯಾವೆಲ್ಲಾ ಕ್ರಮ ಕೈಗೊಳ್ಳಬಹುದು ಎಂದು ಬೆಂಗಳೂರಿಗೆ ಬಂದು ಗಂಗೂಲಿ ದ್ರಾವಿಡ್ ಜತೆ ಚರ್ಚೆ ನಡೆಸಿದ್ದಾರೆ. ಆ ಮೂಲಕ ಮತ್ತೆ ಹಳೆಯ ನಾಯಕನಿಗೆ ಉಪನಾಯಕನ ಕೆಲಸ ಮಾಡಿದ್ದಾರೆ ದ್ರಾವಿಡ್.
ಇದರಲ್ಲಿ ಇನ್ನಷ್ಟು ಓದಿ :