ಹಗಲು-ರಾತ್ರಿ ಟೆಸ್ಟ್ ಪಂದ್ಯದ ಪರ ಕೊಹ್ಲಿಗೂ ಒಲವಿದೆ ಎಂದ ಗಂಗೂಲಿ

ಮುಂಬೈ| Krishnaveni K| Last Modified ಶನಿವಾರ, 26 ಅಕ್ಟೋಬರ್ 2019 (09:53 IST)
ಮುಂಬೈ: ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸುವ ಬಗ್ಗೆ ಅಧ್ಯಕ್ಷ ಸೌರವ್ ಗಂಗೂಲಿ ಗಂಭೀರ ಚಿಂತನೆ ನಡೆಸಿದ್ದು, ಈ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜತೆಗೂ ಚರ್ಚಿಸಿದ್ದಾರೆ.

 
ಈ ಬಗ್ಗೆ ಮಾಧ‍್ಯಮಗಳೊಂದಿಗೆ ಮಾತನಾಡಿರುವ ಗಂಗೂಲಿ ಕೊಹ್ಲಿಗೂ ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಯೋಜಿಸುವ ಬಗ್ಗೆ ಒಲವಿದೆ ಎಂದಿದ್ದಾರೆ. ನಾಯಕ ಇದಕ್ಕೆ ಒಪ್ಪಿದರೆ ನಮ್ಮ ಕೆಲಸ ಸುಗಮವಾಗುತ್ತದೆ. ನಾನು ಅಧ್ಯಕ್ಷನಾಗಿರುವವರೆಗೂ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಪ್ರೋತ್ಸಾಹ ನೀಡುವುದಾಗಿ ಗಂಗೂಲಿ ಹೇಳಿದ್ದಾರೆ.
 
ಮೂಲಗಳ ಪ್ರಕಾರ ಕೋಲ್ಕೊತ್ತಾದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯವನ್ನು ಹಗಲು-ರಾತ್ರಿ ಆಯೋಜಿಸಲು ಗಂಗೂಲಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗಾದಲ್ಲಿ ಭಾರತ ಆಡುವ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯ ಇದಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :