ಇದುವರೆಗೆ ಕೋಚ್ ಆಯ್ಕೆ ಮಾಡುತ್ತಿದ್ದ ಗಂಗೂಲಿಗೇ ಈಗ ಟೀಂ ಇಂಡಿಯಾ ಕೋಚ್ ಆಗುವಾಸೆ!

ಕೋಲ್ಕೊತ್ತಾ| Krishnaveni K| Last Modified ಭಾನುವಾರ, 4 ಆಗಸ್ಟ್ 2019 (08:40 IST)
ಕೋಲ್ಕೊತ್ತಾ: ಟೀಂ ಇಂಡಿಯಾ ಕೋಚ್ ಆಯ್ಕೆ ಸಮಿತಿಯ ಸದಸ್ಯರಾಗಿದ್ದ ಸೌರವ್ ಗಂಗೂಲಿ ಟೀಂ ಇಂಡಿಯಾಗೆ ಹೊಸ ಕೋಚ್ ಹುಡುಕುವ ಕೆಲಸ ಮಾಡುತ್ತಿದ್ದರು. ಈಗ ಅದೇ ಗಂಗೂಲಿಗೆ ಟೀಂ ಇಂಡಿಯಾ ಕೋಚ್ ಆಗುವ ಆಸೆಯಾಗಿದೆ!

 
ಕಳೆದ ಬಾರಿ ಅನಿಲ್ ಕುಂಬ್ಳೆ ಮತ್ತು ರವಿಶಾಸ್ತ್ರಿಯನ್ನು ಕೋಚ್ ಆಗಿ ಆಯ್ಕೆ ಮಾಡುವಾಗ ಆಯ್ಕೆ ಸಮಿತಿ ಸದಸ್ಯರಾಗಿದ್ದ ಮಾಜಿ ನಾಯಕ ಗಂಗೂಲಿ ಮುಂದೊಂದು ದಿನ ತಾವೂ ಟೀಂ ಇಂಡಿಯಾಗೆ ಕೋಚ್ ಆಗಲು ಆಸಕ್ತಿ ಹೊಂದಿರುವುದಾಗಿ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.
 
‘ಸದ್ಯಕ್ಕೆ ಬೇಡ. ಆದರೆ ಮುಂದೊಂದು ದಿನ ನಾನೂ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕುತ್ತೇನೆ’ ಎಂದು ಒಂದು ಕಾಲದ ಯಶಸ್ವೀ ನಾಯಕನೆನಿಸಿಕೊಂಡಿದ್ದ ಗಂಗೂಲಿ ಹೇಳಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :