ಕ್ಯಾಪ್ಟನ್ ಕೆಎಲ್ ರಾಹುಲ್ ಗೆ ಈ ಐಪಿಎಲ್ ಸ್ಪೆಷಲ್ ಯಾಕೆ?

ದುಬೈ| Krishnaveni K| Last Modified ಬುಧವಾರ, 16 ಸೆಪ್ಟಂಬರ್ 2020 (09:40 IST)
ದುಬೈ: ಟೀಂ ಇಂಡಿಯಾದಲ್ಲಿ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಆಗಿ ಭರವಸೆ ಮೂಡಿಸಿರುವ ಕೆಎಲ್ ರಾಹುಲ್ ಐಪಿಎಲ್ ನಲ್ಲಿ ಈ ಬಾರಿ ಪಂಜಾಬ್ ತಂಡದ ನಾಯಕತ್ವ ವಹಿಸುತ್ತಿದ್ದಾರೆ.

 
ರಾಷ್ಟ್ರೀಯ ತಂಡದಲ್ಲಿ ಆಡಿ ಸಾಕಷ್ಟು ಅನುಭವ ಗಳಿಸಿರುವ ರಾಹುಲ್ ಗೆ ನಾಯಕರಾಗಿ ಇದು ಸತ್ವ ಪರೀಕ್ಷೆ ಕಾಲವಾಗಿದೆ. ಭವಿಷ್ಯದಲ್ಲಿ ಟೀಂ ಇಂಡಿಯಾದ ನಾಯಕರಾಗುವ ಸಾಧ್ಯತೆಯಿರುವ ರಾಹುಲ್ ಗೆ ಐಪಿಎಲ್ ನಲ್ಲಿ ಅದನ್ನು ಪ್ರೂವ್ ಮಾಡಿಕೊಂಡರೆ ಮುಂದಿನ ಹಾದಿ ಸುಗಮವಾಗಲಿದೆ. ಅದಕ್ಕೆ ತಕ್ಕಂತೆ ಅನಿಲ್ ಕುಂಬ್ಳೆಯಂತಹ ಚಾಣಕ್ಷ್ಯನ ಸಲಹೆ, ಸೂಚನೆ ರಾಹುಲ್ ಗೆ ಸಿಗಲಿದೆ. ಹೀಗಾಗಿ ನಾಯಕನಾಗಿ ಪರಿಪಕ್ವತೆ ಸಾಧಿಸಲು ಅವರಿಗೆ ಅಪೂರ್ವ ಅವಕಾಶ ಸಿಕ್ಕಂತಾಗಿದೆ.
ಇದರಲ್ಲಿ ಇನ್ನಷ್ಟು ಓದಿ :