Widgets Magazine

ಸಿಟ್ಟಿಗೆದ್ದ ಶ್ರೀಶಾಂತ್ ಸುಪ್ರೀಂ ಕೋರ್ಟ್ ಗೆ!

ಕೊಚ್ಚಿ| Krishnaveni| Last Modified ಶನಿವಾರ, 4 ನವೆಂಬರ್ 2017 (10:11 IST)
ಕೊಚ್ಚಿ: ಮ್ಯಾಚ್ ಫಿಕ್ಸಿಂಗ್ ಕಳಂಕ ತೊಡೆದರೂ ಆಡಲು ಅವಕಾಶ ಕೊಡದ ವಿರುದ್ಧ ತೀವ್ರ ಸಿಟ್ಟಿಗೆದ್ದಿರುವ ವೇಗಿ ಶ್ರೀಶಾಂತ್ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
 
ಮ್ಯಾಚ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದ ಆಟಗಾರರಲ್ಲಿ ಕೆಲವರು ಈಗಲೂ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನೆಲ್ಲಾ ಯಾಕೆ ವಿಚಾರಣೆಗೊಳಪಡಿಸಿಲ್ಲ ಎಂದು ಇತ್ತೀಚೆಗೆ ಶ್ರೀಶಾಂತ್ ಖಾಸಗಿ ವಾಹಿನಿಯೊಂದರಲ್ಲಿ ಕಿಡಿ ಕಾರಿದ್ದರು.
 
ಇದೀಗ ತನಗೆ ಇದೊಂದೇ ಆಯ್ಕೆ ಉಳಿದಿರುವುದು. ನನ್ನ ಹಕ್ಕಿಗಾಗಿ ನಾನು ಹೋರಾಡದೇ ವಿಧಿಯಿಲ್ಲ. ಇದು ಕೇವಲ ಆಡಲು ಅವಕಾಶ ಲಭಿಸುವ ವಿಚಾರ ಮಾತ್ರವಲ್ಲ. ಇದು ನನ್ನ ಗೌರವವನ್ನು ಮರಳಿ ಪಡೆಯುವ ಉದ್ದೇಶವಷ್ಟೇ’ ಎಂದು ಶ್ರೀಶಾಂತ್ ಸುದ್ದಿಗಾರರೊಂದಿಗೆ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :