ಟೀಂ ಇಂಡಿಯಾದಿಂದ ರವಿಚಂದ್ರನ್ ಅಶ್ವಿನ್ ಕೈಬಿಟ್ಟಿದ್ದಕ್ಕೆ ಈ ಕ್ರಿಕೆಟಿಗನಿಗೆ ಬೇಸರ

NewDelhi| Krishnaveni K| Last Modified ಮಂಗಳವಾರ, 24 ಜನವರಿ 2017 (09:17 IST)
ಮುಂಬೈ: ರವಿಚಂದ್ರನ್ ಅಶ್ವಿನ್ ರನ್ನು ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ರೆಸ್ಟ್ ನೀಡಿರುವುದು ಈ ಯುವ ಕ್ರಿಕೆಟಿಗನಿಗೆ ಇಷ್ಟವಾಗಿಲ್ಲವಂತೆ. ಆತನ ಜತೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಬೇಕೆಂಬ ಕನಸು ಕನಸಾಗಿಯೇ ಉಳಿಯತಲ್ಲಾ ಎನ್ನುವುದು ಆತನ ಬೇಸರಕ್ಕೆ ಕಾರಣ.

ಕಿರು ಮಾದರಿಯ ಸರಣಿಗೆ ಆಯ್ಕೆಯಾದ ಜಮ್ಮು ಕಾಶ್ಮೀರದ ಸ್ಪಿನ್ನರ್ ಪರ್ವೇಜ್ ರಸೂಲ್ ಈ ಆಸೆ ಹೊತ್ತುಕೊಂಡಿದ್ದ ಕ್ರಿಕೆಟಿಗ. ಆತನೂ ಯುವ ಸ್ಪಿನ್ನರ್. ಹೆಚ್ಚು ಹಿರಿಯರೊಂದಿಗೆ ಒಡನಾಡುವ ಅವಕಾಶ ಸಿಗುವುದೇ ಇಲ್ಲ. ಹೀಗಿರುವಾಗ

ಅಪರೂಪಕ್ಕೆ ಕಣಿವೆಯ ಹುಡುಗ ತಂಡಕ್ಕೆ ಆಯ್ಕೆಯಾಗಿದ್ದಾನೆ.ಈ ಕ್ರಿಕೆಟಿಗನಿಗೆ ಅಶ್ವಿನ್ ಎಂದರೆ ತುಂಬಾ ಇಷ್ಟ. ವಿಶ್ವದ ನಂ.1 ಬೌಲರ್ ನಿಂದ ಸಾಕಷ್ಟು ಕಲಿಯುವ ಆಸೆ ಹೊಂದಿದ್ದರು. ಆದರೆ ಇದೀಗ ಅವರು ತಂಡಕ್ಕೆ ಬರುವಾಗ ಅಶ್ವಿನ್ ಹೊರಹೋಗುವ ಕಾರಣ ಆ ಅವಕಾಶ ಮಿಸ್ ಆಗಲಿದೆ ಎನ್ನುವುದೇ ಈತನ ಕೊರಗು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :