ಮಯಾಂಕ್ ಅಗರ್ವಾಲ್ ಶತಕ ಸಿಡಿಸಿದರೆ ಬೈಸಿಕೊಂಡಿದ್ದು ಕೆಎಲ್ ರಾಹುಲ್

ಪುಣೆ| Krishnaveni K| Last Modified ಶುಕ್ರವಾರ, 11 ಅಕ್ಟೋಬರ್ 2019 (09:51 IST)
ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿದ್ದರೆ ಅತ್ತ ಕೆಎಲ್ ರಾಹುಲ್ ಬೈಸಿಕೊಂಡಿದ್ದಾರೆ.

 
ಟೀಂ ಇಂಡಿಯಾ ಆರಂಭಿಕರಾಗಿದ್ದ ಕೆಎಲ್ ರಾಹುಲ್ ಫಾರ್ಮ್ ಕೊರತೆಯಿಂದಾಗಿ ತಂಡದಿಂದ ಕೊಕ್ ಪಡೆದಿದ್ದರು. ಹೀಗಾಗಿ ಮಯಾಂಕ್ ನೋಡಿ ಕಲಿ ಎಂದು ಟ್ವಿಟರಿಗರು ರಾಹುಲ್ ಗೆ ಲೇವಡಿ ಮಾಡಿದ್ದಾರೆ.
 
ಸದ್ಯಕ್ಕೆ ರಾಹುಲ್ ಕರ್ನಾಟಕ ಪರ ದೇಶೀಯ ಕ್ರಿಕೆಟ್ ನಲ್ಲಿ ಆಡುತ್ತಿದ್ದಾರೆ. ಮಯಾಂಕ್ ಸತತ ಎರಡು ಶತಕ ಸಿಡಿಸಿದ್ದು ನೋಡಿದ ಮೇಲೆ ರಾಹುಲ್ ಪ್ರತಿಕ್ರಿಯೆ ಹೀಗಿರಬಹುದು ಎಂದೆಲ್ಲಾ ಮೆಮೆಗಳ ಮೂಲಕ ತಮಾಷೆ ಮಾಡಿದ್ದಾರೆ. ಮತ್ತೆ ಕೆಲವರು ಮಯಾಂಕ್ ಆಡುವ ರೀತಿ ನೋಡಿದರೆ ಗೊತ್ತಾಗುತ್ತದೆ ಅವರು ಇಲ್ಲಿಯೇ ಶಾಶ್ವತವಾಗಿ ನಿಲ್ಲಲು ಬಂದಿದ್ದಾರೆ ಎಂದು ರಾಹುಲ್ ಗೆ ಟಾಂಗ್ ಕೊಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :