ದಾವಣೆಗೆರೆ ಎಕ್ಸ್ ಪ್ರೆಸ್ ವಿನಯ್ ಕುಮಾರ್ ನಿವೃತ್ತಿ

ಬೆಂಗಳೂರು| Krishnaveni K| Last Modified ಶನಿವಾರ, 27 ಫೆಬ್ರವರಿ 2021 (08:58 IST)
ಬೆಂಗಳೂರು: ಕರ್ನಾಟಕ ತಂಡದ ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ಕ್ರಿಕೆಟಿಗ ವಿನಯ್ ಕುಮಾರ್ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.

 
’25 ವರ್ಷ ಓಡಿದ ಮೇಲೆ ದಾವಣೆಗೆರೆ ಎಕ್ಸ್ ಪ್ರೆಸ್ ಗೆ ನಿವೃತ್ತಿ ಎಂಬ ನಿಲುಗಡೆಯ ನಿಲ್ದಾಣ ಬಂದಿದೆ. ನಾನು ಅಂತಾರಾಷ್ಟ್ರೀಯ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತಿದ್ದೇನೆ.  ಇದು ಸುಲಭದ ನಿರ್ಧಾರವಲ್ಲ. ಆದರೆ ಎಲ್ಲಾ ಕ್ರೀಡಾಳುಗಳೂ ಒಂದಲ್ಲಾ ಒಂದು ದಿನ ನಿವೃತ್ತಿ ಹೇಳಲೇಬೇಕು. ಹಾಗಾಗಿ ನಿವೃತ್ತಿ ಘೋಷಿಸುತ್ತಿದ್ದೇನೆ’ ಎಂದು ವಿನಯ್ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :