ನಮ್ ಫೋಟೋ ಬೇಕಾದಷ್ಟು ಕ್ಲಿಕ್ಕಿಸಿ, ಮಗಳ ಸುದ್ದಿಗೆಬರಬೇಡಿ: ವಿರುಷ್ಕಾ ಮನವಿ

ಮುಂಬೈ| Krishnaveni K| Last Modified ಬುಧವಾರ, 13 ಜನವರಿ 2021 (16:31 IST)
ಮುಂಬೈ: ಮೊನ್ನೆಯಷ್ಟೇ ಹೆಣ್ಣು ಮಗುವಿನ ಪೋಷಕರಾದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಸಾಮಾಜಿಕ ಜಾಲತಾಣದ ಮೂಲಕ ಫೋಟೋಗ್ರಾಫರ್ ಗಳಿಗೆ ಮನವಿಯೊಂದನ್ನು ಮಾಡಿದ್ದಾರೆ.
 

‘ಎಲ್ಲರಿಗೂ ನಮ್ಮದೊಂದು ಮನವಿ. ನಮ್ಮ ಬಗ್ಗೆ ನೀವು ಎಷ್ಟು ಬೇಕಾದರೂ ಬರೆಯಿರಿ, ಫೋಟೋ ತೆಗೆದುಕೊಳ್ಳಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಯಾವುದೇ ಕಾರಣಕ್ಕೂ ನಮ್ಮ ಮಗುವಿನ ಫೋಟೋ ಅಥವಾ ಆಕೆಗೆ ಸಂಬಂಧಿಸಿದ ವಿಚಾರಗಳನ್ನು ಪ್ರಕಟಿಸಬೇಡಿ. ನಮ್ಮ ಮಗುವಿನ ಖಾಸಗಿತನವನ್ನು ಗೌರವಿಸಿ’ ಎಂದು ವಿರಾಟ್ ದಂಪತಿ ಮನವಿ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :