ವಿರಾಟ್ ಕೊಹ್ಲಿ ಮಗುವಿನ ಫೋಟೋ ಕೊನೆಗೂ ಬಹಿರಂಗ

ಮುಂಬೈ| Krishnaveni K| Last Modified ಮಂಗಳವಾರ, 12 ಜನವರಿ 2021 (10:06 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ನಿನ್ನೆಯಷ್ಟೇ ಹೆಣ್ಣು ಮಗುವಿಗೆ ತಂದೆ-ತಾಯಿಯಾಗಿದ್ದಾರೆ. ಸ್ಟಾರ್ ದಂಪತಿಯ ಮಗುವಿನ ಫೋಟೋ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

 
ಈ ನಡುವೆ, ಕೊಹ್ಲಿ ಮಗುವಿನ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಹ್ಲಿ ಮಗಳ ಫೋಟೋವನ್ನು ಅವರ ಸಹೋದರ ವಿಕಾಸ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಮಗು ಹುಟ್ಟಿದ ಸಂತಸದ ವಿಚಾರವನ್ನು ಹಂಚಿಕೊಂಡ ವಿಕಾಸ್ ಮಗುವಿನ ಮುದ್ದು ಕಾಲುಗಳ ಫೋಟೋವನ್ನು ಪ್ರಕಟಿಸಿದ್ದಾರೆ. ಇದು ವಿರಾಟ್ ದಂಪತಿಯ ಮಗಳು ಎಂದೇ ಹೇಳಲಾಗುತ್ತಿದೆ. ಆದರೆ ಸತ್ಯಾಂಶ ಇನ್ನೂ ತಿಳಿದುಬಂದಿಲ್ಲ.
ಇದರಲ್ಲಿ ಇನ್ನಷ್ಟು ಓದಿ :