ಹಳೆಯ ಮೊಬೈಲ್ ಫೋನ್ ಬಳಸಿ ಕೊಹ್ಲಿ ಮೇಲೆ ಅಭಿಮಾನ ಮೆರೆದ ಅಭಿಮಾನಿ

ಗುವಾಹಟಿ| Krishnaveni K| Last Modified ಸೋಮವಾರ, 6 ಜನವರಿ 2020 (09:47 IST)
ಗುವಾಹಟಿ: ವಿರಾಟ್ ಕೊಹ್ಲಿ ಎಂದರೆ ವಿಶ್ವದೆಲ್ಲೆಡೆ ಅದೆಷ್ಟೋ ಹುಚ್ಚು ಅಭಿಮಾನಿಗಳಿದ್ದಾರೆ. ಕೆಲವರು ಮೈಮೇಲೆಲ್ಲಾ ಹಚ್ಚೆ ಹಾಕಿಸಿಕೊಂಡು ತಮ್ಮ ಪ್ರೀತಿ ಮೆರೆದವರಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ವಿಶಿಷ್ಟವಾಗಿ ತನ್ನ ಅಭಿಮಾನ ಪ್ರದರ್ಶಿಸಿದ್ದಾನೆ.

 
ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿರುವ ರಾಹುಲ್ ಪರೇಕ್ ಎಂಬವರು ಹಳೆಯ ಮೊಬೈಲ್ ಫೋನ್ ಗಳನ್ನೆಲ್ಲಾ ಬಳಸಿ ವಿರಾಟ್ ಕೊಹ್ಲಿಯ ಚಿತ್ರ ಮೂಡಿಸಿದ್ದಾರೆ. ಹಳೆಯ ಮೊಬೈಲ್, ಅದರ ಇತರ ಬಿಡಿಭಾಗಗಳನ್ನು ಈ ಅಪೂರ್ವ ಕಲಾಕೃತಿ ರಚಿಸಲು ಬಳಸಿದ್ದಾರೆ.
 
ಸ್ವತಃ ಕೊಹ್ಲಿ ಅಭಿಮಾನಿಯ ಈ ಅಪೂರ್ವ ಕಲಾಕೃತಿ ನೋಡಿ ಮೆಚ್ಚಿಕೊಂಡಿ ಹಸ್ತಾಕ್ಷರ ನೀಡಿದ್ದಾರೆ. ಅಭಿಮಾನಿಯೂ ಕೊಹ್ಲಿಯೇ ಸ್ವತಃ ತನ್ನ ಬಳಿ ಬಂದು ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಕ್ಕೆ ಖುಷಿಯಾಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :