ಪೌರತ್ವ ಖಾಯಿದೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ವಿರಾಟ್ ಕೊಹ್ಲಿ ಹೇಳಿದ್ದು ಇದೇ ಉತ್ತರ!

ಗುವಾಹಟಿ| Krishnaveni K| Last Modified ಭಾನುವಾರ, 5 ಜನವರಿ 2020 (09:25 IST)
ಗುವಾಹಟಿ: ಪೌರತ್ವ ಖಾಯಿದೆ ಬಗ್ಗೆ ಪರ-ವಿರೋಧ ಪ್ರತಿಭಟನೆಗಳು, ಚರ್ಚೆಗಳೂ ಆಗುತ್ತಿರುವ ಬೆನ್ನಲ್ಲೇ ಪ್ರತಿಭಟನೆಗೆ ತುತ್ತಾಗಿರುವ ಅಸ್ಸಾಂನ ಗುವಾಹಟಿಯಲ್ಲಿ ಟಿ20 ಪಂದ್ಯವಾಡಲು ಟೀಂ ಇಂಡಿಯಾ ಮತ್ತು ಶ್ರೀಲಂಕಾ ಸಜ್ಜಾಗಿವೆ.
 

ಪಂದ್ಯಕ್ಕೆ ಮೊದಲು ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿಗೆ ಪೌರತ್ವ ಖಾಯಿದೆ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ ಯಾವುದೇ ವಿಚಾರದ ಬಗ್ಗೆಯೂ ಸಂಪೂರ್ಣ ತಿಳುವಳಿಕೆ ಇದ್ದರೆ ಮಾತ್ರ ನಾನು ಮಾತನಾಡಬಹುದು ಎಂದು ರಕ್ಷಣಾತ್ಮಕವಾಗಿ ಜಾರಿಕೊಂಡಿದ್ದಾರೆ.
 
ಆದರೆ ಗುವಾಹಟಿಯಲ್ಲಿ ಭದ್ರತೆ ಬಗ್ಗೆ ಪ್ರಶ್ನಿಸಿದಾಗ ಗುವಾಹಟಿ ಸಂಪೂರ್ಣ ಸುರಕ್ಷಿತವಾಗಿದೆ. ನಮಗೆ ಇಲ್ಲಿ ಆಡಲು ಯಾವುದೇ ಭಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :