ರೋಹಿತ್ ಶರ್ಮಾ ಲಕ್ಕಿ ಮೈದಾನದಲ್ಲಿಯೇ ವಿರಾಟ್ ಕೊಹ್ಲಿ ಮುರಿಯಲಿದ್ದಾರೆ ಈ ದಾಖಲೆ

ಇಂದೋರ್| Krishnaveni K| Last Modified ಮಂಗಳವಾರ, 7 ಜನವರಿ 2020 (12:39 IST)
ಇಂದೋರ್: ಭಾರತ ಮತ್ತು ಶ್ರೀಲಂಕಾ ಟಿ20 ನಡುವೆ ಇಂದು ಇಂಧೋರ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

 
ವಿಶೇಷವೆಂದರೆ ಇದು ಉಪ ನಾಯಕ ರೋಹಿತ್ ಶರ್ಮಾಗೆ ಲಕ್ಕಿ ಮೈದಾನ. ರೋಹಿತ್ ಇಲ್ಲಿ ಹಿಂದೊಮ್ಮೆ 43 ಬಾಲ್ ಗಳಲ್ಲಿ 118 ರನ್ ಚಚ್ಚಿ ಹಾಕಿದ್ದನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ.
 
ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಮಾಡಿದ ವಿಶ್ವ ದಾಖಲೆ ರೋಹಿತ್ ಶರ್ಮಾ ಮತ್ತು ಕೊಹ್ಲಿ ಹೆಸರಿನಲ್ಲಿ ಜಂಟಿಯಾಗಿದೆ. ಇಬ್ಬರೂ 2633 ರನ್ ಗಳಿಸಿದ್ದಾರೆ. ಇಂದು ರೋಹಿತ್ ತಂಡದಲ್ಲಿಲ್ಲ. ಕೊಹ್ಲಿ ಇಂದು ಒಂದು ರನ್ ಗಳಿಸಿದರೂ ರೋಹಿತ್ ದಾಖಲೆ ಮುರಿಯಲಿದ್ದಾರೆ. ಅಂತೂ ರೋಹಿತ್ ಲಕ್ಕಿ ಮೈದಾನದಲ್ಲಿಯೇ ಕೊಹ್ಲಿ ಅವರ ದಾಖಲೆ ಮುರಿಯಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :