Widgets Magazine

ಕೆಎಲ್ ರಾಹುಲ್ ಬೆಂಬಲಕ್ಕೆ ಬಂದ ವಿವಿಎಸ್ ಲಕ್ಷ್ಮಣ್

ಬೆಂಗಳೂರು| Krishnaveni K| Last Updated: ಶುಕ್ರವಾರ, 29 ನವೆಂಬರ್ 2019 (09:38 IST)
ಮುಂಬೈ: ಕೆಎಲ್ ರಾಹುಲ್ ಟಿ20 ಪಂದ್ಯಗಳಲ್ಲಿ ಆರಂಭಿಕರಾಗಲಿ ಎಂದು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.

 
ಟಿ20 ಪಂದ್ಯಗಳಲ್ಲಿ ಈಗ ರೋಹಿತ್ ಶರ್ಮಾ ಜತೆಗೆ ಶಿಖರ್ ಧವನ್ ಆರಂಭ ಒದಗಿಸುತ್ತಾರೆ. ಆದರೆ ಸದ್ಯಕ್ಕೆ ಧವನ್ ಗಾಯದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಧವನ್ ಸ್ಥಾನದಲ್ಲಿ ರಾಹುಲ್ ಇನಿಂಗ್ಸ್ ಆರಂಭಿಸಲಿ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
 
ಧವನ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಮತ್ತೆ ಆರಂಭಿಕ ಸ್ಥಾನಕ್ಕೆ ಬರಬಹುದೇ ಎಂಬ ಪ್ರಶ್ನೆ ಬರುತ್ತದೆ. ಆದರೆ ನನ್ನ ಪ್ರಕಾರ ವಿರಾಟ್ ನಂ.3 ರಲ್ಲಿ ಆಡಬೇಕು. ರೋಹಿತ್ ಜತೆಗೆ ಕೆಎಲ್ ರಾಹುಲ್ ಆರಂಭಿಕರಾಗಬೇಕು. ಆ ಸ್ಥಾನದಲ್ಲಿ ಅವರು ಚೆನ್ನಾಗಿ ಪ್ರದರ್ಶನ ನೀಡುತ್ತಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :