ಅರ್ಧಶತಕದ ಜೊತೆಗೆ ದಾಖಲೆ ಮಾಡಿದ ವಾಷಿಂಗ್ಟನ್ ಸುಂದರ್

Shardul
ಬ್ರಿಸ್ಬೇನ್| Krishnaveni K| Last Modified ಭಾನುವಾರ, 17 ಜನವರಿ 2021 (12:31 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ವಾಷಿಂಗ್ಟನ್ ಸುಂದರ್ ಹೊಸ ದಾಖಲೆ ಮಾಡಿದ್ದಾರೆ.
 
Shardul

ಇದಕ್ಕೂ ಮೊದಲು ಬೌಲಿಂಗ್ ನಲ್ಲೂ ಮಿಂಚಿದ್ದ ಸುಂದರ್ 3 ವಿಕೆಟ್ ಕಬಳಿಸಿದ್ದರು. ಬಳಿಕ ಶ್ರಾದ್ಧೂಲ್ ಠಾಕೂರ್ ಜೊತೆಗೆ 7 ನೇ ವಿಕೆಟ್ ಗೆ 123 ರನ್ ಗಳ ಜೊತೆಯಾಟವಾಡಿದ ಸುಂದರ್ 62 ರನ್ ಗಳಿಸಿ ಔಟಾದರು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಪಾದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಗಳಿಸಿದ ಮೂರನೇ ಭಾರತೀಯ ಕ್ರಿಕೆಟಿಗ ಎಂಬ ದಾಖಲೆ ಮಾಡಿದರು.
ಇದರಲ್ಲಿ ಇನ್ನಷ್ಟು ಓದಿ :