ವೇತನಕ್ಕಾಗಿ ಜಿಟಿ20 ಲೀಗ್ ವಿರುದ್ಧ ಬಂಡಾಯವೆದ್ದ ಕ್ರಿಕೆಟಿಗ ಯುವರಾಜ್ ಸಿಂಗ್ ಬಳಗ

ಮುಂಬೈ| Krishnaveni K| Last Modified ಶುಕ್ರವಾರ, 9 ಆಗಸ್ಟ್ 2019 (10:55 IST)
ಮುಂಬೈ: ಗ್ಲೋಬಲ್ ಟಿ20 ಕ್ರಿಕೆಟ್ ಲೀಗ್ ನಲ್ಲಿ ಆಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಅವರ ತಂಡದ ಸದಸ್ಯರು ಬಾಕಿ ವೇತನಕ್ಕಾಗಿ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಬಂದಿದೆ.

 
ಕೆನಡಾದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಟೊರೆಂಟೋ ನ್ಯಾಷನಲ್ಸ್ ತಂಡದ ನಾಯಕರಾಗಿದ್ದಾರೆ. ಇದೀಗ ಟೊರೆಂಟೋ ಮತ್ತು ಮಾಂಟ್ರಿಯಾಲ್ ಟೈಗರ್ಸ್ ನಡುವಿನ ಪಂದ್ಯಕ್ಕೆ ಮೊದಲು ಹೋಟೆಲ್ ರೂಂನಲ್ಲೇ ಉಳಿದುಕೊಂಡು ಬಾಕಿ ವೇತನ ಸಮಸ್ಯೆ ಬಗೆಹರಿಸುವಂತೆ ಯುವಿ ಮತ್ತು ಬಳಗ ಪ್ರತಿಭಟನೆ ನಡೆಸಿದೆ ಎನ್ನಲಾಗಿದೆ.
 
ಇದರಿಂದಾಗಿಯೇ ಈ ಎರಡೂ ತಂಡಗಳ ನಡುವಿನ ಪಂದ್ಯ ಎರಡು ಗಂಟೆಗಳಷ್ಟು ತಡವಾಗಿ ಆರಂಭವಾಯಿತು. ಕೊನೆಗೆ ಫ್ರಾಂಚೈಸಿಗಳು, ಜಿ20 ಲೀಗ್ ವ್ಯವಸ್ಥಾಪಕರು ಸಭೆ ನಡೆಸಿ ಭರವಸೆ ನೀಡಿದ ಬಳಿಕವೇ ಪಂದ್ಯವಾಡಲು ಆಟಗಾರರು ತೆರಳಿದರು ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :