ಉಡುಪಿ: ಪತ್ನಿ ಕೊಲೆಗೆ ಸುಪಾರಿ ಕೊಟ್ಟಿದ್ದ ಪತಿ ಅರೆಸ್ಟ್!

bengaluru| geethanjali| Last Modified ಮಂಗಳವಾರ, 20 ಜುಲೈ 2021 (16:06 IST)
ದುಬೈನಲ್ಲಿದ್ದು ಕೊಂಡು ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ ರಾಮಕೃಷ್ಣ ಉತ್ತರ ಭಾರತ ಮೂಲದ ಹಂತಕರಿಗೆ ಸುಪಾರಿ ನೀಡಿದ್ದ ಆಘಾತಕಾರಿ ಘಟನೆ ತನಿಖೆ ವೇಳೆ ಬೆಳಕಿಗೆ ಬಂದಿದೆ.
ರಾಮಕೃಷ್ಣ ಆಕ್ರಮ ಸಂಬಂಧ ಹೊಂದಿದ್ದು, ಇದು ಪತ್ನಿಗೆ ತಿಳಿದಿತ್ತು. ಅಲ್ಲದೇ ಆಸ್ತಿ ವ್ಯವಹಾರ ಹಿನ್ನೆಲೆಯಲ್ಲಿ ಪತ್ನಿ ಹತ್ಯೆಗೆ ಪತಿ ರಾಮಕೃಷ್ಣ ಸಂಚು ರೂಪಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ವಶಕ್ಕೆ ಪಡೆದ ವಿಚಾರಣೆ ನಡೆಸಿದ ಪೊಲೀಸರು, ನಿನ್ನೆ ರಾಮಕೃಷ್ಣನನ್ನು ಬಂಧಿಸಿದ್ದಾರೆ. ಇದೇ ವೇಳೆ ಸುಪಾರಿ ಹಂತಕರನ್ನು ಬಂಧಿಸಿ, ಇಂದು ಉಡುಪಿಗೆ ಕರೆ ತಂದು ಅಧಿಕೃತವಾಗಿ ಕೊಲೆಯ ಮಾಹಿತಿ ಸಂಗ್ರಹಿಸಲಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :