ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ಉತ್ತರಾಖಂಡ ಸಂಸದ ಸತ್ಪಾಲ್ ಮಹಾರಾಜ್
ನವದೆಹಲಿ |
ವೆಬ್ದುನಿಯಾ|
Last Updated:
ಮಂಗಳವಾರ, 15 ಏಪ್ರಿಲ್ 2014 (10:52 IST)
PTI
ಚುನಾವಣಾ ಸಮರಕ್ಕೆ ಮಹೂರ್ತ ಹತ್ತಿರ ಬರುತ್ತಿದ್ದು ಯಾವ ಪಕ್ಷದಿಂದ ಸ್ಪರ್ಧಿಸಿದರೆ ವಿಜಯಮಾಲೆ ಕೊರಳನ್ನು ಅಲಂಕರಿಸಬಹುದು ಎಂಬ ಲೆಕ್ಕಾಚಾರದಲ್ಲಿ ಮುಳುಗಿರುವ ಅಧಿಕಾರಾಕಾಂಕ್ಷಿಗಳು ಪಕ್ಷದಿಂದ ಪಕ್ಷಕ್ಕೆ ನೆಗೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಉತ್ತರಾಖಂಡ್ನ ಕಾಂಗ್ರೆಸ್ ಸಂಸದ ಸತ್ಪಾಲ್ ಮಹಾರಾಜ್ ಮೋದಿಗೆ ಒಂದು ಅವಕಾಶ ಕೊಟ್ಟು ನೋಡಬೇಕಾಗಿದೆ ಎನ್ನುತ್ತ ಕಾಂಗ್ರೆಸ್ ತೊರೆದು ಬಿಜೆಪಿ ತೆಕ್ಕೆಗೆ ಸೇರಿದ್ದಾರೆ.