Widgets Magazine

ಗಾಂಧೀಜಿಯವರ ಕನಸನ್ನು ಬಿಜೆಪಿ ನನಸಾಗಿಸುತ್ತದೆ: ರಾಜನಾಥ್ ಸಿಂಗ್

PTI

ಶುಕ್ರವಾರ ರಾತ್ರಿ ಕಲ್ಯಾಣದಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು "ಸ್ವಾತಂತ್ರ್ಯ ಪಡೆದ ನಂತರ ಮಹಾತ್ಮಾ ಗಾಂಧಿ ಕಾಂಗ್ರೆಸ್‌ನ್ನು ವಿಸರ್ಜಿಸ ಬಯಸಿದ್ದರು. ಆದರೆ ಕಾಂಗ್ರೆಸ್ ನಾಯಕರು ಅವರ ಸಲಹೆಯನ್ನು ಕೇಳಲಿಲ್ಲ".

"ನಾವು ಭೃಷ್ಟಾಚಾರ ಮುಕ್ತ ಆಡಳಿತ ಮತ್ತು ಅನೇಕ ಸುಧಾರಣೆಗಳನ್ನು ತರಲಿದ್ದೇವೆ ಮತ್ತು ಗಾಂಧಿ ಕನಸನ್ನು ಪೂರೈಸಲಿದ್ದೇವೆ".

"ನಾನು ಸಂಪೂರ್ಣ ದೇಶವನ್ನು ಭೇಟಿ ಮಾಡಿ ಬಂದಿದ್ದೇನೆ ಮತ್ತು ಹೋದಲ್ಲೆಲ್ಲ ಮೋದಿ ಪರ ಬೆಂಬಲವನ್ನು ಕಂಡಿದ್ದೇನೆ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಕೇವಲ ಆರ್ಥಿಕ ಮಹಾಶಕ್ತಿಯಷ್ಟೇ ಅಲ್ಲ, ಜಗತ್ತಿಗೆ ಗುರುವಾಗಲಿದೆ" ಎಂದು ಅವರು ಹೇಳಿದ್ದಾರೆ.

ಠಾಣೆ| ವೆಬ್‌ದುನಿಯಾ| Last Modified ಶನಿವಾರ, 19 ಏಪ್ರಿಲ್ 2014 (09:01 IST)
ಕಾಂಗ್ರೆಸ್‌ನಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಕನಸನ್ನು ನನಸಾಗಿಸಲು ಸಾಧ್ಯವಾಗಿಲ್ಲ, ಅದನ್ನು ಬಿಜೆಪಿ ಪೂರೈಸಲಿದೆ ಎಂದು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮನಮೋಹನ ಸಿಂಗ್‌ರವರ ಮಾಜಿ ಮಾಧ್ಯಮ ಸಲಹಾಕಾರ ಸಂಜಯ್ ಬಾರು ಅವರ ಪುಸ್ತಕದ ಬಗ್ಗೆ ಉಲ್ಲೇಖಿಸಿದ ಅವರು ಈ ಬಗ್ಗೆ ಸೋನಿಯಾ ಸ್ಪಷ್ಟೀಕರಣವನ್ನು ಕೇಳಿದರು. 'ಪ್ರಧಾನಿಗೆ ಕೆಲ ವಿಷಯಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರ ಮಾತನ್ನು ಕೇಳಬೇಕಾಗುತ್ತಿತ್ತು' ಎಂದು ಪುಸ್ತಕದಲ್ಲಿ ಬರೆಯಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :