Widgets Magazine

ನನ್ನ ಮೇಲಿನ ದಾಳಿಗಳ ಹಿಂದೆ ಬಿಜೆಪಿ ಕೈವಾಡವಿದೆ - ಕೇಜ್ರಿವಾಲ್

PTI

ನಿನ್ನೆ ಚುನಾವಣಾ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು "ನನ್ನನ್ನು ಗುದ್ದಿದ್ದ, ಕಪಾಳಕ್ಕೆ ಹೊಡೆದ ಮತ್ತು ಗುರುವಾರ ನಡೆದ ಕಲ್ಲೆಸೆತದ ಘಟನೆಯ ಹಿಂದೆ ಬಿಜೆಪಿಯ ದುರುದ್ದೇಶವಿದೆ" ಎಂದು ಅವರು ಆರೋಪಿಸಿದ್ದಾರೆ.

ಮುಸ್ಲಿಂ ಮತದರರ ಮನವೊಲಿಸುವ ಉದ್ದೇಶದಿಂದ ಅವರು ಹೆಚ್ಚಿನ ಸಭೆಗಳಲ್ಲಿ ಮುಝಪ್ಪರ್ ನಗರದ ದಂಗೆಯ ಬಗ್ಗೆ ಪ್ರಸ್ತಾಪಿಸಿದರು.

ಜೈತಪುರಾ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ 1,500 ಕ್ಕಿಂತ ಹೆಚ್ಚು ಜನರನ್ನುದ್ದೇಶಿ ಮಾತನಾಡುತ್ತಿದ್ದ ಅವರು ರಾಜ್ಯದ ಸಮಾಜವಾದಿ ಪಕ್ಷದ ಭೃಷ್ಟಾಚಾರದ ವಿರುದ್ಧ ಹರಿಹಾಯ್ದರು.

"ಇಲ್ಲಿ ನೇಕಾರರು ತಮ್ಮ ಸಾಲಮನ್ನಾ ಕಾರ್ಡ್ ಪಡೆಯ ಬೇಕಾದರೆ 100 ರೂ ಲಂಚವನ್ನು ಕೊಡಬೇಕಾಗಿದೆ " ಎಂದವರು ವ್ಯಾಕುಲತೆಯನ್ನು ವ್ಯಕ್ತಪಡಿಸಿದ್ದಾರೆ.

ವಾರಣಾಸಿ| ವೆಬ್‌ದುನಿಯಾ|
ನನ್ನ ಮೇಲೆ ಇತ್ತೀಚಿಗೆ ನಡೆಯುತ್ತಿರುವ ದಾಳಿಗಳ ಹಿಂದೆ ಬಿಜೆಪಿ ಪಕ್ಷದ ಕೈವಾಡವಿದೆ ಎಂದು ಆಪ್ ನಾಯಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
"ದೆಹಲಿಯಲ್ಲಿ 49 ದಿನಗಳ ಸರಕಾರವನ್ನು ವಿಸರ್ಜಿಸುವ ಮೊದಲು ಸಾರ್ವಜನಿಕರ ವಿಚಾರ- ವಿಮರ್ಶೆ ಮಾಡದಿದ್ದುದು ನನ್ನ ದೊಡ್ಡ ತಪ್ಪು" ಎಂದು ಅವರು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :