Widgets Magazine

ನಾಮಪತ್ರ ಸಲ್ಲಿಸುವ ಕೊನೆಯ ದಿನ ನಾಪತ್ತೆಯಾದ ಆಪ್‌ ಉಮೇದುವಾರ

PTI

"ಜುನಾಗಡ ಜಿಲ್ಲೆಯ ವಿಸಾವದರ್ ವಿಧಾನಸಭಾ ಕ್ಷೇತ್ರದಿಂದ ಆಪ್‌ನ ಟಿಕೇಟ್ ಪಡೆದಿದ್ದ ಕನಕರಾಯ್ ಕನಾನಿ ಬುಧವಾರ ಬೆಳಗ್ಗಿನಿಂದ ಕಾಣಿಸುತ್ತಿಲ್ಲ" ಎಂದು ಆಪ್‌ನ ವಕ್ತಾರ ಹರ್ಷಿಲ್ ನಾಯಕ್ ತಿಳಿಸಿದ್ದಾರೆ.

ಧೀರುಬಾಯಿ ಭಾಕಡ್ ರ ಬದಲಾಗಿ ಕನಾನಿಗೆ ವಿಸಾವದರ್ ಕ್ಷೇತ್ರದ ಟಿಕೇಟ್‌ನ್ನು ನೀಡಲಾಗಿತ್ತು. ಗುಜರಾತಿನ 7 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ.

"ಅವರೆಲ್ಲಿದ್ದಾರೆ ಎಂದು ಪತ್ತೆ ಹಚ್ಚುತ್ತಿದ್ದೇವೆ. ಅವರು ತಮ್ಮ ಮೊಬೈಲ್‌ನ್ನು ಸ್ವಿಚ್ಡ್ ಆಪ್ ಮಾಡಿರುವುದರಿಂದ ಅವರನ್ನು ಕಂಡು ಹಿಡಿಯುವುದು ಕಷ್ಟವಾಗುತ್ತಿದೆ" ಎಂದು ನಾಯಕ್ ಹೇಳಿದ್ದಾರೆ.

ಅಹಮದಾಬಾದ್| ವೆಬ್‌ದುನಿಯಾ| Last Modified ಗುರುವಾರ, 10 ಏಪ್ರಿಲ್ 2014 (11:27 IST)
ಗುಜರಾತ್‌ನ ವಿಧಾನಸಭಾ ಉಪಚುನಾವಣೆಯಲ್ಲಿ ಆಪ್ ಪಕ್ಷದಿಂದ ಕಣಕ್ಕಿಳಿದಿದ್ದ ನಾಪತ್ತೆಯಾಗಿ ಕೇಜ್ರಿವಾಲ್‌ರ ಪಕ್ಷಕ್ಕೆ ಬಲವಾದ ಆಘಾತ ತಂದಿಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನಾಪತ್ತೆಯಾಗಿರುವ ಆಪ್ ಉಮೇದುವಾರ ಇನ್ನೂ ಸಹ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.


ಇದರಲ್ಲಿ ಇನ್ನಷ್ಟು ಓದಿ :