Widgets Magazine

ವೀರಪ್ಪ ಮೊಯ್ಲಿಗೆ ತಲ್ಲಣ: ಎದುರಾಗಿ ನಿಲ್ಲಲಿದ್ದಾರೆ ಕುಮಾರಸ್ವಾಮಿ

ವೆಬ್‌ದುನಿಯಾ|
PR
PR
ಚಿಕ್ಕಬಳ್ಳಾಪುರ: ಕೇಂದ್ರ ಇಂಧನ ಸಚಿವ ವೀರಪ್ಪ ಮೊಯ್ಲಿ ಅವರಿಗೆ ಮೊದಲನೇ ಪಟ್ಟಿಯಲ್ಲಿ ಟಿಕೆಟ್ ನೀಡದಿದ್ದರಿಂದ ಆತಂಕಿತರಾಗಿದ್ದರು. ಆದರೆ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಅಭ್ಯರ್ಥಿಯಾಗಿ ಘೋಷಿಸಿದ ನಂತರ ಅವರು ನಿರಾಳರಾಗಿದ್ದರು. ಮುಖ್ಯಮಂತ್ರಿ ಅವರು ಚಿಕ್ಕಬಳ್ಳಾಪುರದ ಜನತೆಗೆ ಎತ್ತಿನಹೊಳೆ ಯೋಜನೆಯ ಅನುಷ್ಠಾನವನ್ನು ಘೋಷಿಸಿದಾಗ ವೀರಪ್ಪ ಮೊಯ್ಲಿ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು. ಆಗಲೇ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತಾರೆಂಬ ಸುದ್ದಿ ಹರಿದಾಡಿತ್ತು. ಆದರೆ ಮೊದಲ ಪಟ್ಟಿಯಲ್ಲಿ ಅವರ ಹೆಸರು ಘೋಷಣೆಯಾಗದಿದ್ದಾಗ ಕೊಂಚ ಆತಂಕಿತರಾಗಿದ್ದರು.ನಂತರ ಎರಡನೇ ಪಟ್ಟಿಯಲ್ಲಿ ಘೋಷಣೆಯಾದ ಬಳಿಕ ನಿರಾಳರಾದರು.


ಇದರಲ್ಲಿ ಇನ್ನಷ್ಟು ಓದಿ :