ಸೋನಿಯಾ ಅಳಿಯ ವಾದ್ರಾ ದೇಶದ ನಂಬರ್ ಒನ್ ಭೂಕಬಳಿಕೆದಾರ: ಬಿಜೆಪಿ

PTI

ರಾಜಘರ್ ಜಿಲ್ಲೆಯ ಬಿನಾಗಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು "ಕಾಂಗ್ರೆಸ್ ಹಣದುಬ್ಬರ ಕಡಿಮೆ ಮಾಡುತ್ತೇನೆ ಎಂದಿದ್ದ ಭರವಸೆಯನ್ನು ಮುರಿಯಿತು, ಮತ್ತೀಗ ಜನರು ಕಾಂಗ್ರೆಸ್ ಜತೆಗಿನ ಸಂಬಂಧವನ್ನು ಮುರಿದು ಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.

"ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುವುದರಲ್ಲಿ ತುಂಬ ಮುಂದಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅದು ಸುಳ್ಳು ವಾಗ್ದಾನಗಳನ್ನು ಪ್ರಾರಂಭಿಸುತ್ತದೆ. 60 ವರ್ಷಗಳಲ್ಲಿ ಅಭಿವೃದ್ಧಿಯ ನೀಲನಕ್ಷೆಯನ್ನು ಮಾಡಲು ವಿಫಲವಾದ ಪಕ್ಷ, ವಿಕಾಸವನ್ನು ಹೇಗೆ ಸಾಧಿಸಲು ಸಾಧ್ಯ? ಹಾಗಾಗಿ ಎಲ್ಲ ಕಾಂಗ್ರೆಸ್ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್ ನಿಷ್ಪ್ರಯೋಜಕ ಜನರ ಪಕ್ಷವಾಗಿ ಬಿಟ್ಟಿದೆ" ಎಂದು ಟೀಕೆಯ ಸುರಿಮಳೆಗೈದಿದ್ದಾರೆ.

"ಭಾರತದ ಸ್ವಾಭಿಮಾನವನ್ನು ಕಾಂಗ್ರೆಸ್ ಚೂರುಚೂರಾಗಿಸಿದೆ. ದೇಶಕ್ಕೆ ಮೋದಿ ರೂಪದಲ್ಲಿ ಪ್ರಬಲ ಪ್ರಧಾನಿಯ ಅವಶ್ಯಕತೆ ಇದೆ. ಬಡತನವನ್ನು ನಿರ್ಮೂಲನೆಗೊಳಿಸುತ್ತೇವೆ ಎಂದು ಘೋಷಿಸುವ ಕಾಂಗ್ರೆಸ್‌ ಬಡತನವನ್ನು ಹೇಗೆ ಹೋಗಲಾಡಿಸಬೇಕೆಂದು ನನ್ನನ್ನು ನೋಡಿ ಕಲಿಯಬೇಕಿದೆ" ಎಂದರು.

"ಅವರ ಸರಕಾರ ಬಡತನವನ್ನು ನೀಗಿಸಲು ಅವಶ್ಯಕವಾದ ಹೆಜ್ಜೆಗಳನ್ನು ಇಟ್ಟಿದೆ. ರೈತರಿಗೆ ಸಾರ್ವಜನಿಕ ಖರೀದಿಯ ಮೇಲೆ ಬೋನಸ್ ನೀಡಲಾಗಿದೆ. ಒಂದು ರೂಪಾಯಿಗೆ ಒಂದು ಕಿಲೋ ಅಕ್ಕಿ ಮತ್ತು ಗೋಧಿಯನ್ನು ನೀಡಿದ್ದೇವೆ. ಬಡ ಮಕ್ಕಳ ಶಿಕ್ಷಣದ ಖರ್ಚನ್ನು ನಾವು ವಹಿಸಿಕೊಂಡಿದ್ದೇವೆ".

ರಾಜಘರ್| ವೆಬ್‌ದುನಿಯಾ|
"ದೇಶದ ಬಹುದೊಡ್ಡ ಭೂ- ಮಾಫಿಯಾ ಸೋನಿಯಾ ಗಾಂಧಿ ಮನೆಯಲ್ಲಿ ಕುಳಿತಿದ್ದಾನೆ" ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.
"ಕೇಂದ್ರದ ಕಾಂಗ್ರೆಸ್ ಸರ್ಕಾರ ಮಧ್ಯಪ್ರದೇಶ ಸರಕಾರಕ್ಕೆ ಮೋಸ ಮಾಡಿದೆ. ನಮ್ಮ ಪಾಲಿನ ರೂ 6,000 ಕೋಟಿ ರೂಪಾಯಿಗಳನ್ನು ನಮಗೆ ನೀಡಲಾಗಿಲ್ಲ. ರಾಜ್ಯದ ಕೇಂದ್ರ ನಾಯಕರ ಆಣತಿಯಂತೆ ಮಧ್ಯಪ್ರದೇಶದ ಜತೆ ಭೇದಭಾವ ಮಾಡಲಾಗಿದೆ" ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಆರೋಪಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :