ಭಾರತದ ಯಶಸ್ಸನ್ನು ಮರಳಿ ಬರೆಯುವ ಅವಕಾಶ ಬಂದಿದೆ: ರಾಜನಾಥ್

ನವದೆಹಲಿ| Rajesh patil| Last Modified ಶುಕ್ರವಾರ, 16 ಮೇ 2014 (18:24 IST)
2014ರ ಮಹತ್ತರ ಚುನಾವಣೆಯಲ್ಲಿ ಗೆಲುವಿನತ್ತ ಹೆಜ್ಜೆ ಹಾಕಿರುವ ಬಿಜೆಪಿ ದೇಶದ ಜನತೆಗೆ ಅಭಿನಂದನೆ ಸಲ್ಲಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಧರ್ಮ ಜಾತಿಯನ್ನ ಮೀರಿ ಜನರು ಬೆಂಬಲಿಸಿದ್ದು, ಇಡೀ ದೇಶದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಈ ಐತಿಹಾಸಿಕ ಗೆಲುವಿನ ಹಿಂದೆ ಮೋದಿಯ ಶ್ರಮವಿದೆ. ಈ ಗೆಲುವು ನರೇಂದ್ರ ಮೋದಿ ಜನಪ್ರಿಯತೆಯ ಪ್ರತೀಕ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.


ವಾಜಪೇಯಿ ಕನಸು ಇಂದು ನನಸಾಗಿದೆ. ಇಡೀ ದೇಶದಲ್ಲಿ ಕಮಲದ ಹೂವು ಅರಳಿದೆ. ಬಿಜೆಪಿ ಗೆಲುವಿಗಾಗಿ ದುಡಿದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಧನ್ಯವಾದ ಎಂದ ಅವರು ದೇಶದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ ಎಂದು ಹೇಳಿದ್ದಾರೆ.

ಭಾರತದ ಯಶಸ್ಸನ್ನು ಮರಳಿ ಬರೆಯುವ ಅವಕಾಶ ಬಂದಿದೆ. ಜನರು ನೀಡಿರುವ ಜವಾಬ್ದಾರಿಯ ಅರಿವು ನಮಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ


//elections.webdunia.com/karnataka-loksabha-election-results-2014.htm


//elections.webdunia.com/Live-Lok-Sabha-Election-Results-2014-map.htmಇದರಲ್ಲಿ ಇನ್ನಷ್ಟು ಓದಿ :