ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಸೈಮನ್‌ಗೆ 'ಸ್ಟ್ರಿಕ್ಟಲಿ ಕಮ್ ಡಾನ್ಸಿಂಗ್' ಬೇಕಂತೆ
ಹಾಲಿವುಡ್
Feedback Print Bookmark and Share
 
ಎಕ್ಸ್ ಫಾಕ್ಟರ್ ಜಡ್ಜ್ ಸೈಮನ್ ಕೊವೆಲ್ ಅವರು ವಿಶ್ವದ್ಯಾಂತ ಯಶಸ್ವಿ ಎನಿಸಿರುವ ಸ್ಟ್ರಿಕ್ಟಲಿ ಕಮ್ ಡಾನ್ಸಿಂಗ್ ಶೋವನ್ನು ಖರೀದಿಸಲು ಬಯಸುತ್ತಿದ್ದಾರೆ ಎಂದು ಅವರ ಗೆಳೆಯ ಬ್ರೂನೊ ಟೋನಿಆಲಿ ಹೇಳಿದ್ದಾರೆ.

ಪ್ರತಿ ಶನಿವಾರ ಸ್ಕ್ರಿನಿಂಗ್ ಆಗುವ ಈ ಎರಡು ಪ್ರದರ್ಶನಗಳು ಯುಕೆ ಚಾರ್ಟ್‌ನಲ್ಲಿ ಟಾಪ್ ರೇಟಿಂಗ್ ಪಡೆಯಲು ಪ್ರಬಲ ಪೈಪೋಟಿ ನೀಡುತ್ತಿದ್ದವು.

ಕೊವೆಲ್‌ರ ಎಕ್ಸ್ ಫಾಕ್ಟರ್ ಅನ್ನು ರೇಟಿಂಗ್ಸ್‌‌‌ನಲ್ಲಿ ಹಿಂದಿಕ್ಕಿದ ಸ್ಟ್ರಿಕ್ಟಲಿ.. ಕಡೆಗೆ ಕೊವೆಲ್ ದೃಷ್ಟಿ ಹರಿಸಿದ್ದು ಅದನ್ನು ತಮ್ಮದಾಗಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಬ್ರೂನೊ ಹೇಳಿದ್ದಾರೆ.

"ಸೈಮನ್ ಸ್ಟ್ರಿಕ್ಟಲಿ..ಯನ್ನು ಖರೀದಿಸಲು ಬಯಸುತ್ತಿದ್ದಾರೆ. ಅವರು ಅದನ್ನು ಇಷ್ಟಪಟ್ಟಿದ್ದಾರೆ" ಎಂದು ಅವರು ಹೇಳಿದ್ದಾಗಿ ಟೆಲಿಗ್ರಾಫ್ ವರದಿ ಮಾಡಿದೆ.

"ವಿಶ್ವಾದ್ಯಂತ ಈ ಶೊ ಅದ್ಭುತವಾಗಿ ಮೂಡಿಬಂದಿದೆ, ಆದ್ದರಿಂದ ಸಹಜವಾಗಿಯೇ ಸೈಮನ್ ಅದನ್ನು ತಮ್ಮ ಒಡೆತನಕ್ಕೊಳಪಡಿಸಲು ಬಯಸುತ್ತಾರೆ" ಎಂದೂ ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಕ್ಸ್ ಫಾಕ್ಟರ್, ಜಡ್ಜ್ ಸೈಮನ್ ಕೊವೆಲ್, ಸ್ಟ್ರಿಕ್ಟಲಿ ಕಮ್ ಡಾನ್ಸಿಂಗ್